ಲೋಕಸಭೆ ಚುನಾವಣೆ ಮತದಾನ ಹಿನ್ನೆಲೆ ಶುಕ್ರವಾರ ನಮಾಜ್ ಸಮಯ ಬದಲಾವಣೆ

ಮಂಗಳೂರು: ಲೋಕಸಭೆ ಚುನಾವಣೆಗೆ ಶುಕ್ರವಾರ ಮತದಾನ ನಡೆಯುವುದರಿಂದ ಮತ ಚಲಾವಣೆಗೆ ಅನುಕೂಲವಾಗುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಮಸೀದಿಗಳಲ್ಲಿ ನಮಾಜ್ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಶುಕ್ರವಾರ ಮುಸ್ಲಿಮರು ಮಸೀದಿಗೆ ತೆರಳಿ ನಮಾಜ್ ಸಲ್ಲಿಸುತ್ತಾರೆ. ಬಹುತೇಕ ಮಸೀದಿಗಳಲ್ಲಿ ಶುಕ್ರವಾರದ ನಮಾಜ್ ಸಮಯ ಒಂದೇ ಆಗಿರುತ್ತದೆ. ಲೋಕಸಭೆ ಚುನಾವಣೆ ಮತದಾನ ಶುಕ್ರವಾರವೇ ಇರುವುದರಿಂದ ಒಂದೇ ಊರಿನ ಬೇರೆ ಬೇರೆ ಮಸೀದಿಗಳಲ್ಲಿ ಬೇರೆ ಬೇರೆ ಸಮಯದಲ್ಲಿ ನಮಾಜ್ ಮಾಡಲು ಅವಕಾಶ ಕಲ್ಪಿಸಲು ಜಿಲ್ಲಾ ಸಲಹಾ ಸಮಿತಿ ಮಸೀದಿಗಳ ಆಡಳಿತ ಮಂಡಳಿಗೆ ಸಮಿತಿಗಳಿಗೆ ಸಲಹೆ ನೀಡಿದೆ.

ಮತಗಟ್ಟೆಗೆ ತೆರಳಿದವರು ಮಸೀದಿಗೆ ಬರಲು ತಡವಾಗಬಹುದು. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಮಸೀದಿಗಳಲ್ಲಿ ಬೇರೆ ಬೇರೆ ಸಮಯದಲ್ಲಿ ನಮಾಜ್ ಗೆ ಸಲಹೆ ನೀಡಲಾಗಿದೆ. ಕೆಲವು ಮಸೀದಿಗಳಲ್ಲಿ ಮಧ್ಯಾಹ್ನ 1 ಗಂಟೆಗೆ ಮತ್ತೆ ಕೆಲವು ಮಸೀದಿಗಳಲ್ಲಿ 1.15ಕ್ಕೆ ಉಳಿದ ಮಸೀದಿಗಳಲ್ಲಿ 1.30ಕ್ಕೆ ನಮಾಜ್ ಮಾಡುವಂತೆ ಸಲಹೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read