ರೈಲಿನಲ್ಲಿ ನಮಾಜ್ ಗೆ ಸಿದ್ಧತೆ : ಕ್ಲಾಸ್ ತೆಗೆದುಕೊಂಡ ಟಿಟಿಇ ವಿಡಿಯೋ ವೈರಲ್

ರೈಲಿನಲ್ಲಿ ನಮಾಜ್‌ ಮಾಡಲು ಮುಂದಾಗಿದ್ದ ಕೆಲ ಮುಸ್ಲಿಂ ಪುರುಷರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಸೀಟ್‌ ಪಕ್ಕ, ಓಡಾಡುವ ಜಾಗದಲ್ಲಿ ಪ್ಲಾಸ್ಟಿಕ್‌ ಒಂದನ್ನು ಹಾಕುವ ಪ್ರಯಾಣಿಕರು ನಮಾಜ್‌ ಗೆ ಸಿದ್ಧತೆ ಮಾಡಿಕೊಳ್ತಾರೆ. ಈ ಸಮಯದಲ್ಲಿ ಅಲ್ಲಿಗೆ ಬರುವ ಟಿಟಿಇ ಅಲ್ಲಿ ನಮಾಜ್‌ ಮಾಡದಂತೆ ಪ್ರಯಾಣಿಕರಿಗೆ ತಿಳಿಸ್ತಾರೆ.

ಈ ವಿಡಿಯೋದಲ್ಲಿ ಟಿಟಿಇ ಹೇಳುವ ಮಾತುಗಳು ಸ್ಪಷ್ಟವಾಗಿ ಕೇಳ್ತಿದೆ. ನೀವು ಇಲ್ಲಿ ಏನು ಮಾಡ್ತಿದ್ದೀರಿ? ಪ್ರಯಾಣಿಕರಿಗೆ ತೊಂದರೆ ನೀಡಬೇಡಿ. ಸೀಟ್‌ ಪಕ್ಕದ ಜಾಗದಲ್ಲಿ ಇಲ್ಲವೆ ಸೀಟ್‌ ಮೇಲೆ ನಮಾಜ್‌ ಮಾಡಿ. ದಾರಿಯಲ್ಲಿ ಈ ಕೆಲಸ ಮಾಡಿದ್ರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ರೈಲನ್ನು ತಮಾಷೆ ಮಾಡ್ಬೇಡಿ. ನಿಮ್ಮ ಆಲೋಚನೆಯನ್ನು ಬದಲಿಸಿ, ನೀವು ನಮಾಜ್ ಓದಿದರೆ, ನಿಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಟಿಟಿಇ ಹೇಳ್ತಿದ್ದಾರೆ.

ನಾನು ನನ್ನ ರೈಲಿನಲ್ಲಿ ಹೀಗೆ ಮಾಡಲು ಬಿಡೋದಿಲ್ಲ. ನನ್ನ ಮಾತನ್ನು ಕೇಳದೆ ಹೋದಲ್ಲಿ ರೈಲ್ವೆ ಪೊಲೀಸರನ್ನು ಕರೆಸುತ್ತೇನೆ ಎಂದು ಟಿಟಿಇ ಕೊನೆಯಲ್ಲಿ ಹೇಳ್ತಾರೆ. ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್‌ ಬಂದಿದೆ. ಜನರು, ಸಾರ್ವಜನಿಕ ಪ್ರದೇಶದಲ್ಲಿ ನಮಾಜ್‌ ಮಾಡೋದನ್ನು ತಡೆದ ಟಿಟಿಇಯನ್ನು ಹೊಗಳುತ್ತಿದ್ದಾರೆ.

https://twitter.com/RealAmitMishr/status/1823403757247373602?ref_src=twsrc%5Etfw%7Ctwcamp%5Etweetembed%7Ctwterm%5E1823403757247373602%7Ctwgr%5Ec5101bbcb780c6611006b8a421d01d107f4cb02f%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fnamazapneseatpepadhiyeviralvideoshowsrailwayttescoldingmuslimpassengersforblockingaisleincoachwhilepraying-newsid-n626471168

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read