SHOCKING: ಸಿಗರೇಟ್ ಸೇದಿ ಯುವಕನ ಮುಖಕ್ಕೆ ಹೊಗೆ ಬಿಟ್ಟ ಮಹಿಳೆ: ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಹತ್ಯೆ

ಮಹಾರಾಷ್ಟ್ರದ ನಾಗ್ಪುರದಲ್ಲಿ ಪಾನ್ ಶಾಪ್‌ನಲ್ಲಿ ಧೂಮಪಾನ ಮಾಡುವಾಗ ನಡೆದ ಜಗಳಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ನಾಗ್ಪುರದ ಮಹಾಲಕ್ಷ್ಮಿ ನಗರ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.

ಆರೋಪಿ ಜಯಶ್ರೀ ಪಂಜಾಡೆ ತನ್ನ ಸ್ನೇಹಿತೆ ಸವಿತಾ ಸಾಯರ್ ಅವರೊಂದಿಗೆ ಪಾನ್ ಅಂಗಡಿಯೊಂದರ ಹೊರಗೆ ಧೂಮಪಾನ ಮಾಡುತ್ತಿದ್ದಳು. ಜಯಶ್ರೀ ಸಿಗರೇಟಿನ ಹೊಗೆಯನ್ನು ರಂಜಿತ್ ರಾಥೋಡ್ ಎಂದು ಗುರುತಿಸಲಾದ ಯುವಕನ ಮುಖದ ಮೇಲೆ ಬಿಟ್ಟಿದ್ದಾಳೆ. ಇದು ಅವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ರಂಜಿತ್ ಜಗವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ ನಂತರ ವಾಗ್ವಾದ ದೊಡ್ಡ ಮಟ್ಟದ ಜಗಳಕ್ಕೆ ತಿರುಗಿತು,  ಜಯಶ್ರೀ ರಂಜಿತ್ ನನ್ನು ನಿಂದಿಸಿ ಅವನ ಕಡೆಗೆ ಹೊಗೆ ಬಿಟ್ಟಿದ್ದಾಳೆ. ಅಲ್ಲದೇ, ತನ್ನ ಸ್ನೇಹಿತರಾದ ಆಕಾಶ್ ರಾವುತ್ ಮತ್ತು ಯಶವಂತ್ ಸಾಯರೆಗೆ ಕರೆ ಮಾಡಿ ಕರೆಸಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಆಗಮಿಸಿದ ಆಕಾಶ್ ಚಾಕುವಿನಿಂದ ಇರಿದು ರಂಜಿತ್‌ ನನ್ನು ಹತ್ಯೆ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್ ಫೋನ್‌ ನಿಂದ ವೀಡಿಯೊವನ್ನು ಆಧರಿಸಿ ಪೊಲೀಸರು ಜಯಶ್ರೀ ಪಂಜಾರೆ, ಯಶವಂತ್ ಸಾಯರೆ, ಆಕಾಶ್ ರಾವುತ್ ಮತ್ತು ಸವಿತಾ ಅವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read