ನಾಗಾಲ್ಯಾಂಡ್ ಸಚಿವ ಟೆಮ್ಜೆನ್ ಅವರು ಟ್ವಿಟರ್‌ನಲ್ಲಿ ಸದಾ ಉತ್ತಮ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಚಿವರು ಹಂಚಿಕೊಂಡಿರುವ ಈ ವಿಡಿಯೋ ಖಂಡಿತಾ ನಿಮಗೆ ಇಷ್ಟವಾಗಬಹುದು. ಈ ರಾಜ್ಯದ ಹಳ್ಳಿಗಳು ಬಿದಿರಿನಿಂದ ಮಾಡಿದ ಪರಿಸರ ಸ್ನೇಹಿ ವಾಶ್‌ಬಾಸಿನ್‌ಗಳನ್ನು ಹೇಗೆ ರಚಿಸುತ್ತವೆ ಎಂಬುದನ್ನು ತೋರಿಸುತ್ತದೆ.
ಪ್ರಕೃತಿಯು ಹಿಡಿದಿಟ್ಟುಕೊಳ್ಳುವ ಮತ್ತು ದಯಪಾಲಿಸುವ ವಸ್ತುಗಳನ್ನು ಕೌಶಲ್ಯದಿಂದ ಬಳಸಿಕೊಂಡು ಹೇಗೆ ಪರಿಸರಸ್ನೇಹಿಯಾಗಿಸಬಹುದು ಎಂಬುದನ್ನು ವಿಡಿಯೋದಲ್ಲಿ ನೋಡಬಹುದು. ಪೈಪ್ ನಂತೆ ಬಿದಿರನ್ನು ಇಡಲಾಗಿದ್ದು, ಇದರಲ್ಲಿ ಸಣ್ಣ ರಂಧ್ರದಿಂದ ನೀರು ಹರಿಯುತ್ತದೆ. ನೀರು ವ್ಯರ್ಥವಾಗುವುದನ್ನು ತಡೆಯಲು ಮರದ ಸಣ್ಣ ತುಂಡಿನಿಂದ ಪ್ಯಾಕ್ ಮಾಡಲಾಗಿದೆ.
ಕೈ ತೊಳೆಯಲು ನೀರು ಬೇಕಾದಾಗ ಮರದ ತುಂಡನ್ನು ತೆಗೆದು ನೀರನ್ನು ಉಪಯೋಗಿಸಬಹುದು. ಬಳಿಕ ನೀರು ವ್ಯರ್ಥವಾಗದಿರಲೆಂದು ಮರದ ತುಂಡಿನಿಂದ ಮತ್ತೆ ಮುಚ್ಚಲಾಗುತ್ತದೆ. ಬಿದಿರಿಗೆ ಹಗ್ಗಗಳಿಂದ ಕೈ ತೊಳೆಯುವ ಹ್ಯಾಂಡ್ ವಾಶ್ ಸೋಪ್ ಅನ್ನು ಕಟ್ಟಲಾಗಿದೆ.
ಟ್ವಿಟರ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ನಾಗಾಲ್ಯಾಂಡ್ ಸಚಿವ ಅಲಾಂಗ್, ಈ ರೀತಿಯಾದುದನ್ನು ನೀವು ಎಂದಾದರೂ ಕಂಡಿದ್ದೀರಾ ಎಂದು ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.
ಈ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೆಟ್ಟಿಗರು ನಾಗಾಲ್ಯಾಂಡ್‌ನ ಚಮತ್ಕಾರಿ ವಾಶ್‌ಬಾಸಿನ್‌ಗಳ ಬಗ್ಗೆ ಹೊಗಳಿದ್ದಾರೆ. ಈ ವಿಡಿಯೋ ಸುಮಾರು ಎರಡು ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಇದು ಅದ್ಭುತ ಕಲ್ಪನೆ ಎಂದು ಕರೆದಿರುವ ಅನೇಕ ನೆಟ್ಟಿಗರು ವಿಡಿಯೋಗೆ ಪ್ರತ್ಯುತ್ತರವಾಗಿ ಸಂತೋಷದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.
https://twitter.com/AlongImna/status/1689452756027764736?ref_src=twsrc%5Etfw%7Ctwcamp%5Etweetembed%7Ctwterm%5E1689452756027764736%7Ctwgr%5E46fd2380db08fe99a9b983ecf5a48f5348df9083%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fnagaland-viral-video-minister-temjen-along-shares-how-villages-use-innovative-wash-basins-of-bamboo