ಸದಾ ಆಸಕ್ತಿಕರ ಟ್ವೀಟ್‌ಗಳಿಂದ ದೇಶದುದ್ದಕ್ಕೂ ಫಾಲೋವರ್‌ಗಳನ್ನು ಹೊಂದಿರುವ ನಾಗಾಲ್ಯಾಂಡ್‌ನ ಪ್ರವಾಸೋದ್ಯಮ ಹಾಗೂ ಉನ್ನತ ಶಿಕ್ಷಣ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ.
ಇಂಟರೆಸ್ಟಿಂಗ್ ವಿಡಿಯೋಗಳು/ಚಿತ್ರಗಳಿಗೆ ಅಷ್ಟೇ ವಿನೋದಮಯವಾದ ಕ್ಯಾಪ್ಷನ್ ಕೊಡುವುದು ಇಮ್ನಾರ ಸ್ಟೈಲ್. ಈ ಬಾರಿ ಇಮ್ನಾ ತಮ್ಮ ರಾಜ್ಯದ ಪ್ರಾಕೃತಿಕ ಸೌಂದರ್ಯ ತೋರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
“ಈ ವಿಡಿಯೋವನ್ನು ಯಾರೋ ರೆಕಾರ್ಡ್ ಮಾಡಿದರು, ನಾನು ಆಪ್ಲೋಡ್ ಮಾಡಿದೆ. ಆದರೆ ಸಂಗೀತವನ್ನು ನಾನೇ ಆಯ್ಕೆ ಮಾಡಿದೆ,” ಎಂದು ಫನ್ನಿಯಾದ ಕ್ಯಾಪ್ಷನ್ ಕೊಟ್ಟಿದ್ದಾರೆ ಇಮ್ನಾ.
ನಾಗಾಲ್ಯಾಂಡ್‌ನ ಕಣಿವೆಯೊಂದರ ಮೇಲೆ ಮೋಡಗಳು ತೇಲುತ್ತಿರುವ ಈ ಸುಂದರ ವಿಡಿಯೋಗೆ ʼದಿಲ್ ತೋ ಪಾಗಲ್ ಹೈʼ ಚಿತ್ರದ ಜನಪ್ರಿಯ ಬಿಜಿಎಂ ಒಂದನ್ನು ಹಾಕಲಾಗಿದೆ.
“ಇಂಥ ಅನೇಕ ವಿಡಿಯೋಗಳನ್ನು ಪೋಸ್ಟ್ ಮಾಡಿ ನೀವು ನಾಗಾಲ್ಯಾಂಡ್ ಭೇಟಿ ಮಾಡುವ ಆಸೆಯನ್ನು ನನ್ನಲ್ಲಿ ತಂದಿದ್ದೀರಿ. ನಾಗಾಲ್ಯಾಂಡ್‌ಗೆ ಭೇಟಿ ನೀಡಲು ಸೂಕ್ತ ಸಮಯ ಯಾವುದು ಹಾಗೂ ಅಲ್ಲಿನ ಪ್ರವಾಸೀ ತಾಣಗಳನ್ನು ತಿಳಿಸಿ ಪ್ಲೀಸ್,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
https://twitter.com/AlongImna/status/1637322719141433345?ref_src=twsrc%5Etfw%7Ctwcamp%5Etweetembed%7Ctwterm%5E1637322719141433345%7Ctwgr%5E734a150c64f34d8037b3b56ed1adf7adf703dee8%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fnagaland-minister-temjen-imna-alongs-video-of-cloud-capped-mountains-mesmerises-twitter-3874186