ವಿಶ್ವ ನಿದ್ರಾ ದಿನಕ್ಕೊಂದು ವಿನೋದಮಯ ಟ್ವೀಟ್ ಮಾಡಿದ ನಾಗಾಲ್ಯಾಂಡ್ ಸಚಿವ

ಸದಾ ತಮ್ಮ ಹಾಸ್ಯಪ್ರಜ್ಞೆಯಿಂದಲೇ ಖ್ಯಾತಿ ಪಡೆದಿರುವ ನಾಗಾಲ್ಯಾಂಡ್ ಸಚಿವ ತೆಮ್ಜ಼ೆನ್ ಇಮ್ನಾ ಅಲಾಂಗ್ ವಿಶ್ವ ನಿದ್ರೆ ದಿನದಂದು ಮಾಡಿರುವ ಟ್ವೀಟ್ ನೆಟ್ಟಿಗರಲ್ಲಿ ನಗೆ ಚಟಾಕಿ ಮೂಡಿಸಿದೆ.

ಸಭೆಯೊಂದರಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ಸುತ್ತಲಿನ ಜನ ನಿದ್ರೆಗೆ ಜಾರಿರುವ ಫೋಟೋವೊಂದನ್ನು ಪೋಸ್ಟ್ ಮಾಡಿದ ಅಲಾಂಗ್, “ವಿಶ್ವ ನಿದ್ರಾ ದಿನದ ಶುಭಾಶಯಗಳು. ಸಣ್ಣ ಕಣ್ಣುಗಳಿರುವ ಜನರನ್ನು ಅಭಿನಂದಿಸಲು ಒಂದು ಕ್ಷಣ ಮೀಸಲಿಡೋಣ. 24/7 ಜಾಗೃತರಾಗಿರುವುದು ಯಾವಾಗಲೂ ಆಯ್ಕೆಯಾಗಿರುವುದಿಲ್ಲ ಎಂದು ಅವರು ನಮಗೆ ನೆನಪಿಸುತ್ತಾರೆ,” ಎಂದಿದ್ದಾರೆ.

ಈ ಪೋಸ್ಟಿಗೆ 3,500ಕ್ಕೂ ಹೆಚ್ಚು ಲೈಕ್ಸ್‌ಗಳು ಹಾಗೂ 150 ರೀಟ್ವೀಟ್‌ಗಳು ಸಂದಾಯವಾಗಿವೆ. “ಸರ್‌ ನೀವು ನಿಜಕ್ಕೂ ಉತ್ತಮ ಹಾಸ್ಯಪ್ರಜ್ಞೆ ಉಳ್ಳವರು. ನಿಮ್ಮಂಥ ಇನ್ನೂ ಹೆಚ್ಚಿನ ನಾಯಕರು ನಮಗೆ ಸಿಗುವಂತಾಗಲಿ,” ಎಂದು ನೆಟ್ಟಿಗರೊಬ್ಬರು ಈ ಪೋಸ್ಟ್‌‌ಗೆ ಕಾಮೆಂಟ್ ಮಾಡಿದ್ದಾರೆ.

https://twitter.com/AlongImna/status/1636647856181313536?ref_src=twsrc%5Etfw%7Ctwcamp%5Etweetembed%7Ctwterm%5E1636647856181313536%7Ctwgr%5E3d635255687d1deb5d2dbf11a67e9855421a0ef8%7Ctwcon%5Es1_&ref_url=https%3A%2F%2Fwww.hindustantimes.com%2Findia-news%2Fnagaland-minister-s-hilarious-tweet-on-world-sleep-day-let-s-take-a-moment-101679051081931.html%3Futm_source%3Dmicrosoft-ht

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read