ವಿರಾಟ್​ ಕೊಹ್ಲಿ‌ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಟ ರಾಮ್​ ಚರಣ್​ ಒಲವು

ನವದೆಹಲಿ: ಆರ್​ಆರ್​ಆರ್​ ಚಿತ್ರದ ನಾಟು ನಾಟು ಆಸ್ಕರ್​ ಪಡೆಯುತ್ತಲೇ ನಟ ರಾಮ್ ಚರಣ್ ಜಗತ್ತಿನಾದ್ಯಂತ ಫೇಮಸ್​ ಆಗಿದ್ದಾರೆ. ಇದೀಗ ರಾಮ್​ ಚರಣ್​ ಅವರು ಕ್ರಿಕೆಟಿಗ ವಿರಾಟ್ ಕೊಹ್ಲಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.

ವಿರಾಟ್​ ಕೊಹ್ಲಿ ಅವರ ಬಯೋಪಿಕ್‌ನಲ್ಲಿ ನಟಿಸುವ ಆಸೆ ಇದೆ ಎಂದು ನಟ ಬಹಿರಂಗಪಡಿಸಿದ್ದು, ತಾವು ನೋಡಲು ಅವರಂತೆಯೇ ಇರುವುದಾಗಿ ಹೇಳಿದ್ದಾರೆ.

ಅಮೆರಿಕದಿಂದ ಭಾರತಕ್ಕೆ ಮರಳಿದ ರಾಮ್​ ಚರಣ್ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಆತ್ಮೀಯ ಸ್ವಾಗತ ಪಡೆದರು. ಅವರು ಸಂಜೆ ಇಂಡಿಯಾ ಟುಡೆ ಕಾನ್ಕ್ಲೇವ್‌ಗೆ ಹಾಜರಾಗಿದ್ದರು.

ಅಲ್ಲಿ ಅವರಿಗೆ ಯಾವ ಚಿತ್ರದಲ್ಲಿ ನಟಿಸಲು ಇಷ್ಟಪಡುತ್ತೀರಿ ಎಂದು ಪ್ರಶ್ನೆ ಕೇಳಿದಾಗ “ನಾನು ಕ್ರೀಡೆಗೆ ಸಂಬಂಧಿಸಿದ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಲು ಬಯಸುತ್ತೇನೆ ಎಂದರು. ನಂತರ ವಿರಾಟ್​ ಕೊಹ್ಲಿ ಅವರ ಬಯೋಪಿಕ್​ ಬಗ್ಗೆ ಕೇಳಿದಾಗ ನಾನು ಅವರಂತೆಯೇ ಕಾಣುವುದರಿಂದ ಆ ಪಾತ್ರಕ್ಕೆ ನಾನು ಸೂಟ್​ ಆಗುತ್ತೇನೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read