ಇದು ಗುಟ್ಕಾ ಡಾನ್ಸ್‌….! ಮದುವೆ ಮನೆಯಲ್ಲಿ ವ್ಯಕ್ತಿ ಮಾಡಿದ ನಕ್ಕು ನಗಿಸುವ ನೃತ್ಯದ ವಿಡಿಯೋ ವೈರಲ್‌

ಭಾರತೀಯ ವಿವಾಹಗಳು ನೀಡುವ ಮನರಂಜನೆಗೆ ಸಾಟಿ ಇಲ್ಲವಾಗಿದೆ. ಅದರಲ್ಲಿಯೂ ನಾಗಿನ್‌ ನೃತ್ಯ ಈಗ ಮಾಮೂಲಾಗಿದೆ. ಈ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತದೆ ಎನ್ನುವ ಕಾರಣಕ್ಕೂ ಜನರು ಈಗೀಗ ನಾಗಿನ್‌ ನೃತ್ಯದ ಮೊರೆ ಹೋಗುತ್ತಿದ್ದಾರೆ.

ಆದರೆ ಸ್ವಲ್ಪ ಡಿಫರೆಂಟ್‌ ಎನ್ನುವ ನೃತ್ಯವೊಂದು ಈಗ ವೈರಲ್‌ ಆಗಿದೆ. ಅದು ಗುಟಕಾ ತಿನ್ನುವ ನೃತ್ಯ…!ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹಲವಾರು ಜನರು ಮದುವೆಯಲ್ಲಿ ನೃತ್ಯ ಮಾಡುತ್ತಿರುವುದನ್ನು ನೀಡಬಹುದು. ಆದರೆ ಒಬ್ಬ ವ್ಯಕ್ತಿಯು ವಿಚಿತ್ರವಾದ ನೃತ್ಯ ಮಾಡುವುದನ್ನು ಕಾಣಬಹುದು.

ಅದರಲ್ಲಿ ಈ ವ್ಯಕ್ತಿ ತಂಬಾಕು ತಯಾರಿಕೆಯನ್ನು ತೋರಿಸುವ ಕೈ ಸನ್ನೆಯೊಂದಿಗೆ ನೃತ್ಯ ಶುರು ಮಾಡುತ್ತಾನೆ, ನಂತರ ತಂಬಾಕನ್ನು ಬಾಯಿಯೊಳಗೆ ಹಾಕಿಕೊಂಡು ನೃತ್ಯ ಮಾಡುವಂತೆ ನಟಿಸುವ ವಿಡಿಯೋ ಇದಾಗಿದೆ.

ಗುಟ್ಕಾ ಉತ್ಪನ್ನಗಳನ್ನು ಸೇವಿಸುವುದು ಖಂಡಿತವಾಗಿಯೂ ಹಾನಿಕಾರಕವಾಗಿದೆ, ಆದರೆ ಈತ ಮಾಡಿದ್ದೆಲ್ಲವೂ ನಾಟಕವಷ್ಟೇ. ಈ ವಿಡಿಯೋ 55 ಸಾವಿರ ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read