ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕದ ವೇಳೆ ಕಾಣಿಸಿತ್ತಾ ಭೂತ; ಇಲ್ಲಿದೆ ಅಸಲಿ ಸತ್ಯ

70 ವರ್ಷಗಳ ಬಳಿಕ ಮೇ 6ರ ಶನಿವಾರ ಬ್ರಿಟನ್ ರಾಜನಾಗಿ 3ನೇ ಚಾರ್ಲ್ಸ್ ಪಟ್ಟಾಭಿಷೇಕ ನೆರವೇರಿತು. ಸೆಪ್ಟೆಂಬರ್ 8, 2022 ರಂದು ಅವರ ತಾಯಿ ಎಲಿಜಬೆತ್ II ರ ಮರಣದ ನಂತರ ಅವರು ಸಿಂಹಾಸನಕ್ಕೆ ಏರಿದರು.

ಲಂಡನ್‌ನ ವೆಸ್ಟ್ ಮಿನ್‌ಸ್ಟರ್ ಅಬೆಯಲ್ಲಿ ಜರುಗಿದ ಅದ್ಧೂರಿ ಪಟ್ಟಾಭಿಷೇಕ ಸಮಾರಂಭದಲ್ಲಿ ಸಾವಿರಾರು ಜನರು ನೆರೆದಿದ್ದರು. ಗನ್ ಸೆಲ್ಯೂಟ್ ಗಳೊಂದಿಗೆ ಸಮಾರಂಭವನ್ನು ನೇರ ಪ್ರಸಾರ ಮಾಡಲಾಗಿತ್ತು. ಆದರೆ ಈ ವೇಳೆ ಕಾಣಿಸಿಕೊಂಡಿದ್ದ ಅದೊಂದು ಅಗೋಚರ ಆಕೃತಿ ಹಲವರನ್ನ ಅಚ್ಚರಿಗೊಳಿಸಿದ್ದು ಹುಬ್ಬೇರಿಸುವಂತೆ ಮಾಡಿತ್ತು.

ಕುಡುಗೋಲನ್ನು ಹೋಲುವಂತಹ ವಸ್ತುವನ್ನ ಹಿಡಿದಿದ್ದ ಅಗೋಚರ ಆಕೃತಿಯು ಪಟ್ಟಾಭಿಷೇಕ ಸಭಾಂಗಣದ ಹೊರಗಿನ ಕಾರಿಡಾರ್‌ನಲ್ಲಿ ನಡೆಯುತ್ತಿದ್ದುದ್ದು ಕಂಡುಬಂದಿತ್ತು. ಇದನ್ನು ನೋಡಿದ ಹಲವರು, ಸತ್ತವರ ಆತ್ಮವನ್ನು ಹೊತ್ತೊಯ್ಯಲು ಬರುವ ಗ್ರಿಮ್ ರೀಪರ್ ಅಥವಾ ಭೂತ ಎಂದು ಶಂಕಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಹಲವು ಮೀಮ್ಸ್ ರಚನೆಗೆ ಕಾರಣವಾಗಿತ್ತು.

ಆದರೆ ಇದರ ಸತ್ಯಾಸತ್ಯತೆ ಇದೀಗ ಬಯಲಾಗಿದೆ. ನ್ಯೂಸ್‌ವೀಕ್ ವರದಿಯ ಪ್ರಕಾರ, ವಿಡಿಯೋದಲ್ಲಿ ಕಾಣಿಸಿಕೊಂಡವರನ್ನ ವರ್ಜರ್ ಎಂದು ಗುರುತಿಸಲಾಗಿದೆ. ವರ್ಜರ್ ಎಂದರೆ ಕ್ರೈಸ್ತ ಧಾರ್ಮಿಕ ಸೇವೆಗಳಿಗೆ ಸಹಾಯ ಮಾಡುವ ವ್ಯಕ್ತಿ ಎಂದು ಹೇಳಲಾಗಿದೆ.

https://twitter.com/rightsideoptics/status/1654956576514650114?ref_src=twsrc%5Etfw%7Ctwcamp%5Etweetembed%7Ctwterm%5E1654956576514650114%7Ct

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read