ಮೈಸೂರು: ಮೈಸೂರಿನಲ್ಲಿ ಹುಲಿ ದಾಳಿ ಪ್ರಕರಣ ಮುಂದುವರೆದಿದ್ದು, ಇಂದು ಮತ್ತೋರ್ವ ರೈತ ಹುಲಿ ದಾಳಿಗೆ ಬಲಿಯಾಗಿದ್ದಾರೆ. ಕಳೆದ ಐದು ದಿನಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ.
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೆಗಾಲದಲ್ಲಿ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ರೈತನ ಮೇಲೆ ಹುಲಿ ದಾಳಿ ನಡೆಸಿದ್ದು, ರೈತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ನಿಂಗಯ್ಯ (65) ಮೃತ ರೈತ.
ಐದು ದಿನಗಳ ಹಿಂದೆ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ರೈತ ರಾಜಶೇಖರ್ ಎಂಬುವವರು ಹುಲಿದಾಳಿಗೆ ಸಾವನ್ನಪ್ಪಿದ್ದರು. ಇಂದು ಕುರ್ಣೆಗಾಲದಲ್ಲಿ ಹುಲಿ ದಾಳಿ ನಡೆಸಿದ್ದು, ಮತ್ತೋರ್ವ ರೈತನನ್ನು ಬಲಿ ಪಡೆದಿದೆ. ಮೈಸೂರಿನ ಸರಗೂರಿನಾದ್ಯಂತ ರೈತರು, ಗ್ರಾಮಗಳ ಜನರು ಭಯಭೀತರಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
			 
		 
		 
		 
		 Loading ...
 Loading ... 
		 
		 
		