ಮೈಸೂರು: ಮಹಿಳೆಯೊಬ್ಬರು ಮೂರು ವರ್ಷದ ಮಗನಿಗೆ ನೇಣು ಬಿಗಿದು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಮುರುಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ದೀಪಿಕಾ (25) ತನ್ನ ಮಗ ಮೂರುವರ್ಷದ ಗಾನ್ವಿಕ್ ಗೆ ನೇಣು ಬಿಗಿದು ಹತ್ಯೆಗೈದಿದ್ದು, ಬಳಿಕ ಆರು ವರ್ಷದ ಮಗಳು ಲೋಚನಾಳಿಗೂ ನೇಣು ಬಿಗಿಯಲು ಯತ್ನಿಸಿದ್ದಾಳೆ. ಆದರೆ ಮಗಳು ಸಾವಿನಿಂದ ಪಾರಾಗಿದ್ದಾಳೆ. ಬಳಿಕ ದೀಪಿಕಾ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪತಿ ಸ್ವಾಮಿ ಬಾಡಿಗೆ ಮನೆ ಮಾಡಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.