ಮೈಸೂರು: ರೀಲ್ಸ್ ಗಾಗಿ ಗನ್ ಹಿಡಿದು ಜೀಪ್ ಮೇಲೇರಿ ಪೋಸ್ ಕೊಟ್ಟಿದ್ದ ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೈಸೂರಿನ ಕೃಷ್ಣರಾಜ ಸಂಚಾರಿ ಪೊಲೀಸ್ ಠಾಣೆಯಲ್ಲಿ ರೀಲ್ಸ್ ಮಾಡಿದ್ದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ವಿನೋದ್ ಗನ್ ಹಿಡಿದು ಜೀಪ್ ಮೇಲೆ ನಿಂತು ರೀಲ್ಸ್ ಮಾಡಿದ್ದ ವ್ಯಕ್ತಿ. ಮೈಸೂರಿನ ಟಿ.ಕೆ.ಬಡಾವಣೆ ನಿವಾಸಿ.
ಗನ್ ಹಿಡಿದು ರೀಲ್ಸ್ ಗೆ ಪೋಸ್ ನೀಡಿದ್ದಲ್ಲದೇ ಜೀಪ್ ನ ಬಾನೆಟ್ ಮೇಲೆ ನಿಂತು ರೀಲ್ಸ್ ವಿಡಿಯೋಗೆ ಪೋಸ್ ನೀಡಿದ್ದ. ಸಾರ್ವಜನಿಕ ರಸ್ತೆಯಲ್ಲಿ ಜೀಪ್ ಚಾಲನೆ ಮಾಡಿದ ಆರೋಪದಡಿ ವಿನೋದ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿಂದೆ ವಿನೋದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರೀಲ್ಸ್ ಗಾಗಿ ನಕಲಿ ಗನ್ ಅದು. ಪಟಾಕಿ ಗನ್ ಹೊರತು ನಿಜವಾದ ಗನ್ ಅಲ್ಲ ಎಂದು ಹೇಳಿಕೆ ಕೊಟ್ಟಿದ್ದ. ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ವಾರ್ನ್ ಮಾಡಿ ಪೊಲೀಸರು ಕಳುಹಿಸಿದ್ದರು. ಇದೀಗ ಸಾರ್ವಜನಿಕ ಸ್ಥಳದಲ್ಲಿ ಜೀಪ್ ಮೇಲೆ ನಿಂತು ರೀಲ್ಸ್ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.