BIG NEWS: 20ಕ್ಕೂ ಹೆಚ್ಚು ಮಕ್ಕಳ ಮೇಲೆ ಹುಚ್ಚುನಾಯಿ ದಾಳಿ: ಆಕ್ರೋಶಗೊಂಡು ನಾಯಿಯನ್ನೇ ಕೊಂದು ಹಾಕಿದ ಗ್ರಾಮಸ್ಥರು

ಮೈಸೂರು: ಹುಚ್ಚುನಾಯಿಯೊಂದು 20ಕ್ಕೂ ಹೆಚ್ಚು ಮಕ್ಕಳ ಮೇಲೆ ದಾಳಿ ನಡೆಸಿ, ಕಚ್ಚಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ.

ಹುಲ್ಲಹಳ್ಳಿಯಲ್ಲಿ ಹುಚ್ಚು ನಾಯಿ ಹಾವಳಿಯಿಂದಾಗಿ ಗ್ರಾಮಸ್ಥರು ಜೀವಭಯದಲ್ಲಿ ಬದುವಂತಾಗಿದೆ. ಹುಚ್ಚುನಾಯಿಯೊಂದು ಸಿಕ್ಕ ಸಿಕ್ಕವರ ಮೇಲೆ ದಾಲಿ ನಡೆಸಿದ್ದು, 20ಕ್ಕೂ ಹೆಚ್ಚು ಮಕ್ಕಳು ಹುಚ್ಚುನಾಯಿ ದಾಳಿಯಿಂದ ಗಾಯಗೊಂಡಿದ್ದಾರೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ.

ಗ್ರಾಮದಲ್ಲಿ ಇನ್ನೂ ಎರಡು ನಾಯಿಗಳು ಆತಂಕವನ್ನು ಹುಟ್ಟಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಬೀದಿನಾಯಿಗಳಿಗೆ ಕಡಿವಾಣಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮೈಸೂರಿನ ಮೇಟಗಳ್ಳಿ ದೇವಾಲಯದ ಬಸವನಿಗೆ ಹುಚ್ಚುನಾಯಿಯೊಂದು ಕಚ್ಚಿತ್ತು. ಬಸವನಿಗೆ ಗ್ರಾಮಸ್ಥರು ಚಿಕಿತ್ಸೆ ಕೊಡಿಸಿದ್ದರೂ ರೇಬಿಯಸ್ ಹೆಚ್ಚಾದ ಪರಿಣಾಮ ಬಸವ ನಾಯಿಯಂತೆ ಶಬ್ದಮಾಡುತ್ತಾ ಆತಂಕ ಸೃಷ್ಟಿಸಿತ್ತು. ಬಳಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read