BIG NEWS: ವಾಹನ ಸವಾರರ ಗಮನಕ್ಕೆ: ಕೆ.ಆರ್.ಎಸ್.ರಸ್ತೆ ಬಂದ್

ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ರೈಲ್ವೆ ಲೆವಲ್ ಕ್ರಾಸಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ರಸ್ತೆಯಲ್ಲಿ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ಈ ಭಾಗದಲ್ಲಿ ಸಂಚಾರ ಬಂದ್ ಆಗಿದ್ದು, ಪೊಲೀಸರು ಪರ್ಯಾಯ ಮಾರ್ಗ ಅನುಸರಿಸುವಂತೆ ಸೂಚಿಸಿದ್ದಾರೆ. ಮೈಸೂರು ಕೆ.ಆರ್.ಎಸ್ ರಸ್ತೆಯನ್ನು ಹೋಟೆಲ್ ರಾಯಲ್ ಜಂಕ್ಷನ್ ನಿಂದ ರೈಲ್ವೆ ಲೆವಲ್ ಕ್ರಾಸಿಂಗ್ ಬಳಿ ಭಾಗಶಃ ರಸ್ತೆ ಬಂದ್ ಆಗಿದೆ. ಎರಡು ದಿನಗಳ ಕಾಲ ಕಾಮಗಾರಿ ನಡೆಯುತ್ತಿದ್ದು, ನಿನ್ನೆಯಿಂದ ರಸ್ತೆ ಮಾರ್ಗ ಬಂದ್ ಮಾಡಲಾಗಿದೆ.

ಪರ್ಯಾಯ ಮಾರ್ಗವಾಗಿ ಮೈಸೂರು ಕಡೆಯಿಂದ ಹೆಬ್ಬಾಳ ಹೊರ ವರ್ತುಲ ರಸ್ತೆ ಕಡೆಯಿಂದ , ಕೆ.ಆರ್.ಎಸ್ ರಸ್ತೆ ಮತ್ತು ಮೈಸೂರು-ಬೆಂಗಳೂರು ಓಆರ್ ಆರ್ ಕಡೆಯಿಂದ ಬರುವ ವಹನಗಳನ್ನು ಪರ್ಯಾಯ ಮಾರ್ಗಗಳ ಕಡೆ ಕಳುಹಿದ್ಸಲಾಗುತ್ತಿದೆ. ಮೈಸೂರು ಕಡೆಯಿಂದ ಬರುವ ವಾಹನಗಳು ಜೆಕೆ ಟೈರ್ ಫ್ಯಾಕ್ಟರಿಯ ಹಿಂದಿನ ಗೇಟ್ ಬಳಿ ಬಲಕ್ಕೆ ತಿರುಗಿ ಬಳಿಕ ಸುನಂದಾ ಅಗರಬತ್ತಿ ಫ್ಯಾಕ್ಟರಿ ಕಡೆಗೆ ಕೆ ಆರ‍್ ಎಸ್ ರಸ್ತೆ ತಲುಪಬಹುದು.

ಮೈಸೂರು-ಬೆಂಗಳೂರು ಓಆರ್ ಎಸ್ ಕಡೆಯಿಂದ ಬರುವವರು ಜಿ ಆರ್ ಎಸ್ ಪ್ಯಾಂಟಿಸಿ ಪಾರ್ಕ್ ಗೂ ಮೊದಲು ಜೆ ಕೆ ಫ್ಯಾಕರಿ ಮುಖ್ಯಗೇಟ್ ಬಳಿಯಿಂದ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಕೆ ಆರ್ ಎಸ್ ರಸ್ತೆಯನ್ನು ತಲುಪಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read