ಮೈಸೂರಲ್ಲಿ ಬಲೂನ್ ಮಾರುವ ಬಾಲಕಿ ರೇಪ್ & ಮರ್ಡರ್ ಕೇಸ್ ಗೆ ಸಂಬಂಧಿಸಿದಂತೆ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನ ಕಾರ್ತಿಕ್ ಎಂದು ಗುರುತಿಸಲಾಗಿದೆ. ಟೆಂಟ್ ನಲ್ಲಿ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನ ಎಳೆದೊಯ್ದ ಕಾರ್ತಿಕ್ ಅತ್ಯಾಚಾರ ಮಾಡಿ ಕೊಲೆಗೈದು ಎಸ್ಕೇಪ್ ಆಗಿದ್ದನು.
ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕಾರ್ತಿಕ್ ಈ ಕೃತ್ಯ ಎಸಗಿರುವುದು ಬಯಲಾಗಿದೆ. ನಂತರ ಈತ ಮೈಸೂರಿನಿಂದ ಕೊಳ್ಳೇಗಾಲಕ್ಕೆ ಎಸ್ಕೇಪ್ ಆಗಿದ್ದನು. ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲಕ್ಕೆ ಆತನನ್ನು ಬಂಧಿಸಲು ಹೋದಾಗ ಕಾನ್ಸ್ಟೇಬಲ್ ಮೇಲೆ ದಾಳಿ ನಡೆಸಿ ಪರಾರಿಯಾಗಲು ಮುಂದಾಗಿದ್ದಾನೆ. ಕೂಡಲೇ ಸಬ್ ಇನ್ಸ್ ಪೆಕ್ಟರ್ ಜೈ ಕೀರ್ತಿ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.
ದಸರಾ ಹಬ್ಬದಲ್ಲಿ ಬಲೂನ್ ಮಾರಾಟ ಮಾಡಲು ಬಾಲಕಿ ಹಾಗೂ ಕುಟುಂಬ ಹೊಟ್ಟೆಪಾಡಿಗಾಗಿ ಕಲಬುರಗಿಯಿಂದ ಮೈಸೂರಿಗೆ ಬಂದಿದ್ದರು. ಬಲೂನ್ ವ್ಯಾಪಾರ ಮಾಡಿ ಬಾಲಕಿ ತನ್ನ ತಂದೆ-ತಾಯಿ ಜೊತೆ ಟೆಂಟ್ ನಲ್ಲಿ ಮಲಗಿದ್ದಳು. ಆದರೆ ಬೆಳಗ್ಗೆ ಬಾಲಕಿ ನಾಪತ್ತೆಯಾಗಿದ್ದಳು. ನಂತರ ಹುಡುಕಾಡಿದಾಗ ಮಣ್ಣಿನ ಗುಡ್ಡೆಯೊಂದರಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ಮೈಸೂರಿನ ನಜರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.