ನನ್ನ ಮಕ್ಕಳು ಈಗಾಗಲೇ ಸೆಕ್ಸ್ ನಲ್ಲಿ ಎಕ್ಸ್ ಪರ್ಟ್; ಮನ ಬಿಚ್ಚಿ ಮಾತನಾಡಿದ ಖ್ಯಾತ ನಟಿ

ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಜನರ ಮುಂದಿಡುತ್ತಾರೆ. ಈಗ ಅವರು ಮಕ್ಕಳು ಹಾಗೂ ಸೆಕ್ಸ್‌ ವಿಷ್ಯದಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ರಿಯಾ ಚಕ್ರವರ್ತಿ ಅವರ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿದ ಸುಶ್ಮಿತಾ ಸೇನ್‌, ತನ್ನ ಮಕ್ಕಳಿಗೆ ಲೈಂಗಿಕತೆ ಬಗ್ಗೆ ವಿವರಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಸುಶ್ಮಿತಾ ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ಲೈಂಗಿಕತೆಯ ಬಗ್ಗೆ ಮಾತನಾಡುವುದು ತುಂಬಾ ವಿಭಿನ್ನವಾಗಿದೆ. ನಾನು ನನ್ನ ತಾಯಿಯೊಂದಿಗೆ ನಡೆಸಿದ ಸಂಭಾಷಣೆಗೆ ಹೋಲಿಸಿದರೆ, ನನ್ನ ಮಕ್ಕಳ ಜೊತೆ ನಡೆಸುವ ಸಂಭಾಷಣೆ ಹೆಚ್ಚು ಮುಕ್ತವಾಗಿದೆ ಸುಶ್ಮಿತಾ ಸೇನ್‌ ಹೇಳಿದ್ದಾರೆ.

ನಾನು ನನ್ನ ಹೆಣ್ಣುಮಕ್ಕಳಿಗೆ ಲೈಂಗಿಕ ಕ್ರಿಯೆಯನ್ನು ವಿವರಿಸಬೇಕಾಗಿಲ್ಲ. ಅವರು ಈಗಾಗಲೇ ಪಿಎಚ್‌ಡಿ ಮಾಡಿದ್ದಾರೆ. ನನ್ನ ಕಿರಿಯ ಮಗಳು ಜೀವಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದಾಳೆ. ಆದ್ದರಿಂದ ಆಕೆಗೆ ತಾಂತ್ರಿಕ ಪದಗಳು ತಿಳಿದಿವೆ. ನಾನು ಚರ್ಚೆಗಳನ್ನು ಸಾರ್ವತ್ರಿಕವಾಗಿರಿಸಲು ಮತ್ತು ಲೈಂಗಿಕತೆಯನ್ನು ಸರಿಯಾದ ಸಮಯ ಮತ್ತು ಸಂದರ್ಭದ ಮೇಲೆ ಕೇಂದ್ರೀಕರಿಸಲು ಬಯಸುತ್ತೇನೆ ಎಂದಿದ್ದಾರೆ. ಸೆಕ್ಸ್ ಅನ್ನು ಗೌರವದಿಂದ ನೋಡಬೇಕು. ಗೆಳೆಯರ ಒತ್ತಡಕ್ಕೆ ಈ ಕೆಲಸ ಮಾಡಬಾರದು. ಇದು ನಿಮಗೆ ಒಳ್ಳೆಯ ಭಾವನೆ ಮೂಡಿಸಬೇಕು, ನಿಮಗಾಗಿ ನೀವು ತೆಗೆದುಕೊಳ್ಳುವ ನಿರ್ಧಾರ ಇದು ಎಂದು ಸುಶ್ಮಿತಾ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read