ಮಕ್ಕಳ ಇಷ್ಟದಂತೆ ಎರಡನೇ ಮದುವೆಗೆ ರೆಡಿಯಾದ ಖ್ಯಾತ ನಟನ ಮಾಜಿ ಪತ್ನಿ

ಹೈದರಾಬಾದ್: ನನ್ನ ಮಗಳು ಆದ್ಯಾ ನಾನು ಮತ್ತೆ ಮದುವೆಯಾಗಲು ಬಯಸುತ್ತಾಳೆ ಎಂದು ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ, ನಟಿ ರೇಣು ದೇಸಾಯಿ ತನ್ನ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪವನ್ ಕಲ್ಯಾಣ್ ವಿಚ್ಛೇದನದ ನಂತರವೂ ಎರಡನೇ ಮದುವೆಗೆ ಏಕೆ ಮುಂದಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ ತನ್ನ ಪರ್ಸನಲ್ ವಿಷಯಗಳ ಬಗ್ಗೆ ಮಾತನಾಡದ ರೇಣು ಮೌನ ಮುರಿದು ಗಾಳಿ ಸುದ್ದಿಗಳ ತೆರವುಗೊಳಿಸಲು ಕೆಲವು ವೈಯಕ್ತಿಕ ವಿಷಯಗಳನ್ನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಪವನ್‌ ಗೆ ವಿಚ್ಛೇದನ ನೀಡಿದ ನಂತರ ನಾನು ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ. ನಿಶ್ಚಿತಾರ್ಥದ ಚಿತ್ರ ವೈರಲ್ ಆಗಿತ್ತು. ನಿಶ್ಚಿತಾರ್ಥದ ಚಿತ್ರವನ್ನು ನಾನೇ ಬಹಿರಂಗಪಡಿಸಿದ್ದೇನೆ ಎಂದು ರೇಣು ಒಪ್ಪಿಕೊಂಡಿದ್ದರು. ತನ್ನ ಎರಡನೇ ಮದುವೆಯನ್ನು ರದ್ದುಗೊಳಿಸಲಾಗಿಲ್ಲ. ಅದನ್ನು ಮುಂದೂಡಲಾಗಿದೆ ಎಂದು ಅವರು ಹಿಂದೆ ಹೇಳಿದ್ದರು.

ನಿಶ್ಚಿತಾರ್ಥ ನಡೆದಾಗ ಆದ್ಯಾಗೆ 7 ವರ್ಷ. ಅವಳು ಇನ್ನೂ ಚಿಕ್ಕವಳಾಗಿದ್ದು, ಅವಳಿಗೆ ನನ್ನ ಅಗತ್ಯವಿತ್ತು, ಅವಳು ಬೆಳೆದು ಕಾಲೇಜಿಗೆ ಹೋಗುವವರೆಗೂ ಕಾಯಲು ನಾನು ನಿರ್ಧರಿಸಿದ್ದೇನೆ. ನಂತರ ಮದುವೆಯಾಗುವ ಬಗ್ಗೆ ನಾನು ನಿರ್ಧರಿಸುತ್ತೇನೆ ಎಂದು ರೇಣು ಹೇಳಿದ್ದಾರೆ.

ತನ್ನ ಎರಡನೇ ಮದುವೆಗೆ ತನ್ನ ಮಕ್ಕಳು(ಮಗ ಅಕಿರಾ ಮತ್ತು ಮಗಳು ಆದ್ಯಾ) ಬೆಂಬಲ ನೀಡುತ್ತಿದ್ದಾರೆ. ಮತ್ತೆ ಮದುವೆಯಾಗಲು ಬಯಸುತ್ತಾರೆ. ಎರಡನೇ ಮದುವೆಗೆ ನಾನು ಕೂಡ ಸಿದ್ಧ ಎಂದು ಹೇಳಿದ್ದಾರೆ.

ರೇಣು ಅವರು ವಿವಾಹ ಪದ್ಧತಿಯಲ್ಲಿ ನಂಬಿಕೆ ಇಟ್ಟಿದ್ದಾರೆ. ಇನ್ನೆರಡು ವರ್ಷದೊಳಗೆ ಮರುಮದುವೆಯಾಗುತ್ತೇನೆ. ಸಾರ್ವಜನಿಕವಾಗಿ ತನ್ನ ಬಗ್ಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಲು ಈ ವಿವರಗಳನ್ನು ಬಹಿರಂಗಪಡಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ರೇಣು ತನ್ನ ಜೀವನದಲ್ಲಿ ಒಬ್ಬ ವ್ಯಕ್ತಿ ಇದ್ದಾನೆ ಮತ್ತು ಅವನು ಅವಳನ್ನು ಅರ್ಥಮಾಡಿಕೊಳ್ಳುತ್ತಾನೆ. ಸಂಪೂರ್ಣವಾಗಿ ಬೆಂಬಲ ನೀಡುತ್ತಾನೆ ಎಂದು ಬಹಿರಂಗಪಡಿಸಿದ್ದರು. ಆದರೆ, ರೇಣು ಇನ್ನೂ ವ್ಯಕ್ತಿಯ ವಿವರಗಳನ್ನು ಮತ್ತು ಚಿತ್ರಗಳನ್ನು ಬಹಿರಂಗಪಡಿಸಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read