ಮಗನೊಂದಿಗಿನ ಸೆಲ್ಫಿ ಶೇರ್‌ ಮಾಡಿದ ಸುಮಲತ

ಬಹುಭಾಷಾ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಷ್ ತಮ್ಮ ಮಗ ಅಭಿಷೇಕ್ ಅಂಬರೀಷ್‌ನೊಂದಿಗೆ ಕಳೆದ ಸಂತಸದ ಕ್ಷಣವೊಂದರ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಮ್ಮ- ಮಗನ ಕ್ಯಾಂಡಿಡ್‌ ಕ್ಷಣಗಳ ಸೆಲ್ಫಿ ತೆಗೆದುಕೊಂಡ ಸುಮಲತಾ ಮಗನ ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಫ್ಯಾಶನ್ ಉದ್ಯಮಿ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪರನ್ನು ಅಭಿಷೇಕ್ ವರಿಸಲಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಅಭಿಷೇಕ್ ಹಾಗೂ ಅವಿವಾ ಪರಸ್ಪರ ಉಂಗುರ ಬದಲಿಸಿಕೊಂಡಿದ್ದರು.

“ಆತ ಇನ್ನೂ ನನ್ನ ಮಗುವಾಗಿದ್ದಂತೆಯೇ ಒಂದು ಅಪ್ಪುಗೆ,” ಎಂದು ಕ್ಯಾಪ್ಷನ್ ಹಾಕಿ ಈ ಫೋಟೋ ಅಪ್ಲೋಡ್ ಮಾಡಿದ್ದಾರೆ ಸುಮಲತ. ಆಕೆ ಅನುಯಾಯಿಗಳು ಹಾಗೂ ಸಿನೆಮಾ ರಂಗದ ಮಿತ್ರರು ಈ ಪೋಸ್ಟ್‌ಗೆ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದು, “ಬಹಳ ಕ್ಯೂಟ್ ಆದ ಅಮ್ಮ – ಮಗ,” ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read