ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಮತ್ತು ಹುಡುಗಿಯರನ್ನೆಲ್ಲಾ ಕಚ್ಚಿ ಗಾಯಗೊಳಿಸಿದ ವ್ಯಕ್ತಿ; ವಿಚಿತ್ರ ವರ್ತನೆಯಿಂದ ಸ್ಥಳೀಯರಿಗೆ ಶಾಕ್

ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಸಾರ್ವಜನಿಕರನ್ನು ಕಚ್ಚಿ ಸ್ಥಳೀಯರಲ್ಲಿ ಭಯವನ್ನುಂಟುಮಾಡಿದ ಘಟನೆ ವರದಿಯಾಗಿದೆ.

ಮಹಿಳೆ ಮತ್ತು ಹುಡುಗಿಯರು ಸೇರಿದಂತೆ ಆರಕ್ಕೂ ಹೆಚ್ಚು ಜನರನ್ನು ಒಂದು ಗಂಟೆಯೊಳಗೆ ಕಚ್ಚಿ ಗಾಯಗೊಳಿಸಿದ್ದಾನೆ. ಆತ ಕಚ್ಚುತ್ತಾ ದಾಳಿ ನಡೆಸುತ್ತಿದ್ದಂತೆ ಜನರು ಉದ್ರಿಕ್ತರಾಗಿ ಓಡುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದರಿಂದ ಆತಂಕಗೊಂಡ ದಾರಿಹೋಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಆಗಮಿಸುವ ಮೊದಲು ಸ್ಥಳೀಯರು ಹಗ್ಗದಿಂದ ಆತನನ್ನು ತಡೆದು ಹಿಡಿಯುವಲ್ಲಿ ಯಶಸ್ವಿಯಾದರು. ಸದ್ಯ ಪೊಲೀಸರು ಆ ವ್ಯಕ್ತಿಯ ಕುಟುಂಬದ ಪತ್ತೆಗೆ ಯತ್ನಿಸುತ್ತಿದ್ದಾರೆ. ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರಬಹುದು ಎಂದು ಹೇಳಲಾಗಿದ್ದು ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read