Mutual Funds : ಮ್ಯೂಚುವಲ್ ಫಂಡ್ ನತ್ತ ಹೂಡಿಕೆದಾರರ ಚಿತ್ತ…..50 ಲಕ್ಷ ಕೋಟಿ ರೂಪಾಯಿ ದಾಟಿದ ಎಯುಎಂ…!

ಹೂಡಿಕೆ ಮೇಲೆ ಒಲವು ತೋರಿಸುತ್ತಿರುವ ಜನರ ಸಂಖ್ಯೆ ಏರಿಕೆಯಾಗ್ತಿದೆ. ಒಂದ್ಕಡೆ ಯುವಜನತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚು ಮಾಡಿದ್ರೆ ಮತ್ತೊಂದು ಕಡೆ  ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆದಾರರ ಆಸಕ್ತಿ ನಿರಂತರವಾಗಿ ಹೆಚ್ಚುತ್ತಿದೆ. ಇದು ನಿರಂತರವಾಗಿ ಹೆಚ್ಚುತ್ತಿರುವ ಎಯುಎಂ  ಮತ್ತು ಮ್ಯೂಚುಯಲ್ ಫಂಡ್‌ಗಳ ಒಳಹರಿವಿನ ನಡೆಯುತ್ತಿರುವ ಬದಲಾವಣೆ ಇದಕ್ಕೆ ಸ್ಪಷ್ಟ ಉದಾಹರಣೆ ಆಗಿದೆ.

ಮ್ಯೂಚುವಲ್ ಫಂಡ್‌ಗಳ ಎಯುಎಂ ಅಂದ್ರೆ ಅಸೆಟ್‌ ಅಂಡರ್‌ ಮ್ಯಾನೇಜ್ಮೆಂಟ್‌ ಮೊದಲ ಬಾರಿಗೆ 50 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಒಳಹರಿವಿನ ಹೆಚ್ಚಳ ಸತತ 35 ನೇ ತಿಂಗಳು ಮುಂದುವರೆದಿದೆ. ಸ್ಟಾಕ್ ಬ್ರೋಕಿಂಗ್ ಕಂಪನಿ ಪ್ರಭುದಾಸ್ ಲಿಲ್ಲಾಧರ್‌ ತನ್ನ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ವರದಿ ಪ್ರಕಾರ, ಮ್ಯೂಚುವಲ್ ಫಂಡ್‌ಗಳ ಎಯುಎಂ 2024 ರ ಜನವರಿಯಲ್ಲಿ 52.74 ಲಕ್ಷ ಕೋಟಿ ರೂಪಾಯಿ ಆಗಿದೆ. ಹಿಂದಿನ ಡಿಸೆಂಬರ್ 2023 ರಲ್ಲಿ ಮ್ಯೂಚುವಲ್ ಫಂಡ್‌ಗಳು ಎಯುಎಂ 50.78 ಲಕ್ಷ ಕೋಟಿ ರೂಪಾಯಿ ಆಗಿತ್ತು. ಎಸ್‌ ಐ‌ ಪಿ ಮೂಲಕ ಮ್ಯೂಚುವಲ್‌ ಫಂಡ್‌ ನಲ್ಲಿ ಹೂಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಜನವರಿ ತಿಂಗಳಿನಲ್ಲಿ ಎಸ್‌ ಐ ಪಿ ಮೂಲಕ 18,838 ಕೋಟಿ ರೂಪಾಯಿ ಹೂಡಿಕೆ ಬಂದಿದೆ.

ಕಳೆದ ಒಂದು ವರ್ಷದಲ್ಲಿ ನಿಪ್ಪಾನ್ ಇಂಡಿಯಾ ಲಾರ್ಜ್ ಕ್ಯಾಪ್ ಫಂಡ್ ದೊಡ್ಡ ಕ್ಯಾಪ್ ವಿಭಾಗದಲ್ಲಿ ಶೇಕಡಾ 36.27ರಷ್ಟು ಹೆಚ್ಚಿನ ಲಾಭವನ್ನು ನೀಡಿದೆ. ಮಿಡ್ ಕ್ಯಾಪ್ ವಿಭಾಗದಲ್ಲಿ, ಕ್ವಾಂಟ್ ಮಿಡ್ ಕ್ಯಾಪ್ ಫಂಡ್ ಶೇಕಡಾ 51.87 ರಷ್ಟು ಹೆಚ್ಚಿನ ಆದಾಯ ನೀಡಿದೆ. ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ ಬಂಧನ್ ಸ್ಮಾಲ್ ಕ್ಯಾಪ್ ಫಂಡ್ ಅಗ್ರಸ್ಥಾನದಲ್ಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read