ಗಾಂಧಿಯಿಂದ ಐನ್‌ಸ್ಟೈನ್‌ವರೆಗೆ……..ಜಿಮ್ ಬಾಡಿಯಾಗಿದ್ರೆ ಮಹನೀಯರು ಹೇಗೆ ಕಾಣುತ್ತಿದ್ರು ಎಂಬ ಬಗ್ಗೆ ಚಿತ್ರ ರಚಿಸಿದ ಕಲಾವಿದ

ಮುಂಬೈ ಭವಿಷ್ಯದಲ್ಲಿ ಹೇಗೆ ಕಾಣಿಸುತ್ತದೆ ಎಂಬುದನ್ನು ಬಿಂಬಿಸುವ ಅದ್ಭುತ ಕಲಾಕೃತಿಯನ್ನು ರಚಿಸಿದ ಕಲಾವಿದರೊಬ್ಬರು ಈಗ ಐತಿಹಾಸಿಕ ವ್ಯಕ್ತಿಗಳ ಕುತೂಹಲಕಾರಿ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಅವರು ತಮ್ಮ ಕಾಲದಲ್ಲಿ ಜಿಮ್ ಉತ್ಸಾಹಿಗಳಾಗಿದ್ದರೆ ಅವರು ಹೇಗಿರುತ್ತಿದ್ದರು ಎಂಬುದನ್ನು ಊಹಿಸಿ ಚಿತ್ರ ಬಿಡಿಸಿದ್ದಾರೆ.

ಹೌದು, ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುವ ಚಿತ್ರದಲ್ಲಿ, ಮಹಾತ್ಮ ಗಾಂಧೀಜಿಯವರು ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದು, ಭಾರ ಎತ್ತುತ್ತಿರುವುದನ್ನು ತೋರಿಸಿದ್ದಾರೆ. ಎರಡನೇ ಚಿತ್ರದಲ್ಲಿ ರವೀಂದ್ರನಾಥ ಠಾಗೋರ್ ಅವರ ಸ್ನಾಯುವಿನ ಮೈಕಟ್ಟು ಪ್ರದರ್ಶಿಸುವುದನ್ನು ಒಳಗೊಂಡಿದೆ. ಮೂರನೆಯ ಚಿತ್ರವು ಶ್ರೇಷ್ಠ ಮತ್ತು ಅತ್ಯಂತ ಪ್ರಭಾವಶಾಲಿ ಭೌತಶಾಸ್ತ್ರಜ್ಞರಲ್ಲಿ ಒಬ್ಬರಾದ ಆಲ್ಬರ್ಟ್ ಐನ್‌ಸ್ಟೈನ್ ಅವರ ಸೀಳಿರುವ ಕಟ್ಟನ್ನು ಚಿತ್ರಿಸಲಾಗಿದೆ. ಬಹುಶಃ ಅತ್ಯಂತ ವಿಸ್ಮಯಕಾರಿ ರಚಿತವಾದ ಚಿತ್ರವೆಂದರೆ ನೆಲ್ಸನ್ ಮಂಡೇಲಾ ಅವರದ್ದು. ಅವರು ಸಿಕ್ಸ್ ಪ್ಯಾಕ್ ದೇಹದೊಂದಿಗೆ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.

ಈ ಕಲಾಕೃತಿಯನ್ನು ರಚಿಸಿದ ಕಲಾವಿದ ಸಾಹಿದ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಿಡ್‌ಜರ್ನಿ ಎಐ ಬಳಸಿ ಚಿತ್ರಗಳನ್ನು ರಚಿಸಲಾಗಿದೆ ಎಂದು ಸಾಹಿದ್ ತಿಳಿಸಿದ್ದಾರೆ. ಹಂಚಿಕೊಂಡ ನಂತರ, ಪೋಸ್ಟ್ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್ಸ್ ಗಳನ್ನು ಗಳಿಸಿದೆ. ಇನ್ಸ್ಟಾಗ್ರಾಂ ಬಳಕೆದಾರರು ಕಲಾವಿದನ ಕೌಶಲ್ಯಕ್ಕೆ ಪ್ರಭಾವಿತರಾದರು.

ಈ ಹಿಂದೆ, ಸಾಹಿದ್ ಅವರು ದೇಶಾದ್ಯಂತ ವಿವಿಧ ನಗರಗಳಲ್ಲಿ ಮೆಟ್ರೋ ವ್ಯವಸ್ಥೆಗಳ ಎಐ ರಚಿತ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಇದು ಭಾರಿ ಟ್ರೆಂಡ್ ಸೃಷ್ಟಿಗೆ ಕಾರಣವಾಗಿತ್ತು.

Muscle Men: Mahatma Gandhi to Albert Einstein; artist generates AI images of heroes hitting the gym

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read