SHOCKING NEWS: ಚಾಕುವಿನಿಂದ ಇರಿದು ಸೋದರ ಮಾವನನ್ನೇ ಕೊಂದ ಅಳಿಯ

ಹಾಸನ: ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಜಿಗೆರೆ ಗ್ರಾಮದಲ್ಲಿ ಸೋದರ ಮಾವನನ್ನೇ ಅಳಿಯ ಕೊಲೆ ಮಾಡಿದ್ದಾನೆ.

50 ವರ್ಷದ ಪ್ರಭುಸ್ವಾಮಿ ಕೊಲೆಯಾದ ವ್ಯಕ್ತಿ. 22 ವರ್ಷದ ಅಜಯ್ ಕೊಲೆ ಆರೋಪಿಯಾಗಿದ್ದಾನೆ. ಗಂಜಿಗೆರೆಯ ಸಾವಿತ್ರಮ್ಮ ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದು, ಅಣ್ಣ ಪ್ರಭುಸ್ವಾಮಿ ಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಜಮೀನು ವಿಚಾರವಾಗಿ ಪ್ರಭುಸ್ವಾಮಿ ತಂಗಿ ಸಾವಿತ್ರಮ್ಮನೊಂದಿಗೆ ಜಗಳವಾಡುತ್ತಿದ್ದ. ಆಕೆಯ ಮಗಳನ್ನು ನಿಂದಿಸುತ್ತಿದ್ದ.

ಕುಡಿದು ಬಂದು ಪ್ರಭುಸ್ವಾಮಿ ಗಲಾಟೆ ಮಾಡುತ್ತಿರುವ ಬಗ್ಗೆ ಸಾವಿತ್ರಮ್ಮ ಬೇರೆ ಊರಿನಲ್ಲಿದ್ದ ಮಗ ಅಜಯ್ ಗೆ ಹೇಳಿದ್ದರು. ಅಜಯ್ ಗಂಜಿಗೆರೆಗೆ ಬಂದಾಗ ತಾಯಿ ಜೊತೆ ಮಾವ ಜಗಳವಾಡುತ್ತಿರುವುದನ್ನು ಗಮನಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read