ಮಗಳಿಗೆ ಕಿರುಕುಳ ಕೊಡಬೇಡ ಎಂದಿದ್ದಕ್ಕೆ ಮಾವನನ್ನೇ ಕೊಂದ ಅಳಿಯ: ಮದುವೆಯಾದ 40 ದಿನದಲ್ಲೇ ದುಷ್ಕೃತ್ಯ

ಕೋಲಾರ: ಮಗಳಿಗೆ ಕಿರುಕುಳ ಕೊಡಬೇಡ ಎಂದಿದ್ದಕ್ಕೆ ಮಾವನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ.

ಶಾಹಿದ್ ನಗರ ನಿವಾಸಿ ಬಾಬು ಶರೀಫ್ ಅಳಿಯನಿಂದ ಕೊಲೆಯಾದ ವ್ಯಕ್ತಿ. 40 ದಿನಗಳ ಹಿಂದೆ ಬಾಬು ಶರೀಫ್ ಪುತ್ರಿ ಸಾನಿಯಾ ಖಾನಂ ಮದುವೆ ತಬರೇಜ್ ಪಾಶಾನೊಂದಿಗೆ ನೆರವೇರಿತ್ತು. ಸುಮಾರು 20 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದು, ಸಾಕಷ್ಟು ಚಿನ್ನಾಭರಣ, ಬೈಕ್ ಕೊಡಲಾಗಿತ್ತು.

ಆದರೆ, ಮದುವೆಯಾದ ಎರಡೇ ದಿನಕ್ಕೆ ತಬರೇಜ್ ಪಾಶಾ ಪತ್ನಿ ಸಾನಿಯಾಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಮನೆಯಲ್ಲಿ ಕೆಲಸ ಮಾಡಿಕೊಂಡು ಬಿದ್ದಿರಬೇಕು ಎಂದು ಹಲ್ಲೆ ಮಾಡಿದ್ದು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕಿರುಕುಳ ಸಹಿಸಲಾಗದೆ ಆಗಸ್ಟ್ 11ರಂದು ಸಾನಿಯಾ ತವರಿಗೆ ವಾಪಸ್ ಆಗಿದ್ದಾಳೆ. ನಂತರ ಪತ್ನಿಗೆ ಮೆಸೇಜ್ ಮಾಡಿ ತಬರೇಜ್ ಬೆದರಿಕೆ ಹಾಕಿದ್ದಾನೆ.

ಮಗಳಿಗೆ ಕಿರುಕುಳ ನೀಡಿದ ಬಗ್ಗೆ ಪ್ರಶ್ನಿಸಲು ಬಾಬು ಶರೀಫ್ ಅವರು ತಬರೇಜ್ ಮನೆಗೆ ಹೋಗಿದ್ದಾಗ ಗಲಾಟೆ ಮಾಡಿ ತಬರೇಜ್ ಮತ್ತು ಆತನ ತಾಯಿ ಜಬೀನಾ ಚಾಕುವಿನಿಂದ ಇಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಾಬು ಶರೀಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಬರೇಜ್ ಪಾಶಾ ಮತ್ತು ಆತನ ತಾಯಿಯನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read