ನೈತಿಕ ಪೊಲೀಸರಿಂದ ಚಾಲಕನ ಹತ್ಯೆ

ತ್ರಿಶೂರ್: ಕೆಲವು ವಾರಗಳ ಹಿಂದೆ ಕೇರಳದ ತ್ರಿಶೂರ್ ಪ್ರದೇಶದಲ್ಲಿ ‘ನೈತಿಕ ಪೊಲೀಸರಿಂದ’ ಅಮಾನುಷವಾಗಿ ಥಳಿಸಲ್ಪಟ್ಟ 33 ವರ್ಷದ ಬಸ್ ಚಾಲಕ ಸಾವನ್ನಪ್ಪಿದ್ದಾರೆ. ಮೃತರನ್ನು ಚಿರಕಲ್ ಮೂಲದ ಸಹರ್ ಎಂದು ಗುರುತಿಸಲಾಗಿದ್ದು, ಫೆಬ್ರವರಿ 18 ರಿಂದ ತ್ರಿಶೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪ್ರಕರಣದಲ್ಲಿ ಇದುವರೆಗೆ ಎಂಟು ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 18 ರಂದು ಈ ಘಟನೆ ನಡೆದಿದ್ದು, ಫೆಬ್ರವರಿ 21 ರಂದು ಪೊಲೀಸ್ ದೂರು ದಾಖಲಾಗಿತ್ತು. ಆರೋಪಿಗಳನ್ನು ರಾಹುಲ್, ಬಿಜಿತ್, ವಿಷ್ಣು, ಬಿನು, ಅರುಣ್, ಅಭಿಲಾಷ್ ಎಂದು ಗುರುತಿಸಲಾಗಿದೆ. ಸಹರ್​ ತಮ್ಮ ಸ್ನೇಹಿತೆಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.

ಹತ್ತಿರದ ದೇವಸ್ಥಾನದ ಸಿಸಿ ಟಿವಿಯಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read