ಚಿಕ್ಕಮಗಳೂರು: ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಕಾರು ಚಾಲಕ ಯಶವಂತ್ ಬಂಧಿತ ಆರೋಪಿ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕಾಂಗ್ರೆಸ್ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಕಾರು ಚಾಲಕ. ವಿವಾಹಿತ ಮಹಿಳೆ ಗಾಯಿತ್ರಿ ಎಂಬುವವರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯಶವಂತ್, ತಮ್ಮ ಸಂಬಂಧಕ್ಕೆ ಗಾಯತ್ರಿ ಪತಿ ಪ್ರಸನ್ನ ಅಡ್ಡಿಯಾಗಿದ್ದಾನೆ ಎಂದು ಕೊಲೆ ಮಾಡಿದ್ದ.
ಮಾರ್ಚ್ 17ರಿಂದ ಬೆನಕಲ್ ಗ್ರಾಮದ ಪ್ರಸನ್ನ ನಾಪತ್ತೆಯಾಗಿದ್ದ. ಜುಲೈ 21ರಂದು ಚಿಕ್ಕಮಗಳೂರಿನ ಬಳಿ ಪ್ರಸನ್ನ ಶವ ಪತ್ತೆಯಾಗಿತ್ತು. ಪ್ರಸನ್ನನ್ನು ಕೊಲೆ ಮಾಡಿ ಚಿಕ್ಕಮಗಳುರಿನ ಲಿಂಗದಹಳ್ಳಿ ಬಳಿ ಎಸೆದು ಹೋಗಿದ್ದರು. ಪ್ರಕರಣ ಸಂಬಂಧ ಇದೀಗ ಶಾಸಕರ ಕಾರು ಚಾಲಕ ಯಶವಂತ್ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.