BREAKING: ಬೆಚ್ಚಿಬಿದ್ದ ಬನಹಟ್ಟಿ ಜನ: ಕಲ್ಲಿನಿಂದ ಜಜ್ಜಿ ಇಬ್ಬರು ಸೋದರಿಯರ ಬರ್ಬರ ಹತ್ಯೆ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿ ಇಬ್ಬರು ಸಹೋದರಿಯರನ್ನು ಹತ್ಯೆ ಮಾಡಲಾಗಿದೆ. ಶನಿವಾರಪೇಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಲ್ಲಿನಿಂದ ಜಜ್ಜಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಬೋರವ್ವ(40) ಯಲ್ಲವ್ವ ಪೂಜಾರಿ(48) ಹತ್ಯೆಗೀಡಾದವರು ಎಂದು ಹೇಳಲಾಗಿದೆ. ಅಕ್ಕ, ತಂಗಿಯನ್ನು ಭಾವ ಕಾಡಪ್ಪ ಭುಜಂಗ ಕೊಲೆ ಮಾಡಿದ್ದಾನೆ. ಅಕ್ಕನ ಮನೆಗೆ ಬೋರವ್ವ ಬಂದಿದ್ದಾಗ ಜಗಳವಾಗಿದ್ದು, ಈ ವೇಳೆ ಘಟನೆ ನಡೆದಿದೆ. ಬನಹಟ್ಟಿ ಠಾಣೆ ಪೊಲೀಸರು ಆರೋಪಿ ಕಾಡಪ್ಪ ಭುಜಂಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read