ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಒಂದೇ ಒಂದು ಅಭಿವೃದ್ಧಿ ಕಾಮಗಾರಿ ಮಾಡಿಲ್ಲ. ಡಿ.ಕೆ.ಶಿವಕುಮಾರ್ ಅವರ ಎರಡು ವರ್ಷದ ಸಾಧನೆ ಏನು? ಎಂದು ತೋರಿಸಲಿ ಎಂದು ಬಿಜೆಪಿ ಶಾಸಕ ಮುನಿರತ್ನ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನಿರತ್ನ, ಡಿ.ಕೆ.ಶಿವಕುಮಾರ್ ಡಿಸಿಎಂ ಆಗಿ ಎರಡು ವರ್ಷವಾಯಿತು ಸಾದಹನೆ ಏನು? ನಗರಾಭಿವೃದ್ಧಿ ಸಚಿವರಾಗಿ ಬೆಂಗಳೂರು ನಗರಕ್ಕೆ ಅವರ ಕೊಡುಗೆಯೇನು? ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ನಿಂತಿರುವ ರಸ್ತೆ ಕಾರ್ಯ ಮಾಡಿಸಿ ಎಂದರೆ ಟನಲ್ ಮಾಡಲು ಹೋಗಿದ್ದಾರೆ. ಸುರಂಗ ರಸ್ತೆ ಮಾಡಿಸಲು ನಾಲ್ಕು ಜನರನ್ನು ನೇಮಿಸಿದ್ದಾರೆ. ಬೆಂಗಳೂರಿನಲ್ಲಿ ಹಲವು ಫ್ಲೈ ಓವರ್ ಗಳ ಕೆಲಸವೇ ನಿಂತು ಹೋಗಿದೆ. ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಿಡಿಕಾರಿದರು.
ಆರ್.ಆರ್.ನಗರದಲ್ಲಿ ರಸ್ತೆ ಗುಂಡಿ ತೇಪೆ ಹಚ್ಚುವ ಕೆಲಸಕ್ಕೆ ಫ್ಲೆಕ್ಸ್ ಮಾಡಿಸಿದ್ದಾರೆ. ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಡಿಸಿಎಂ ಬಂದು ಗುದ್ದಲಿ ಪೂಜೆ ಮಾಡಿದ್ದಾರೆ. ಇದನ್ನು ಯಾರಾದರೂ ಕೇಳಿದ್ದೀರಾ? ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಗುದ್ದಲಿ ಪೂಜೆ ಮಾಡಲು ಶೋಲೆ ಸಿನಿಮಾ ಸ್ಟೈಲ್ ನಲ್ಲಿ ಫ್ಲೆಕ್ಸ್ ಹಾಕಿಸಿದ್ದಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಗಬ್ಬರ್ ಸಿಂಗ್, ಧರ್ಮೇಮ್ದ್ರ, ಹೇಮಾಮಾಲಿನಿ ತರಹ ಪೋಸ್ ಕೊಟ್ಟು ಫ್ಲೆಕ್ಸ್ ಕಟ್ಟಿಸಿದ್ದಾರೆ. ಅದರಲ್ಲಿ ಒಬ್ಬರು ಗಬ್ಬರ್ ಸಿಂಗ್ ರೀತಿ ಇದ್ದರೆ, ಇನ್ನೊಬ್ಬರು ಹೇಮಾಮಾಲಿನ ತರಹ ಇದ್ದರು ಎಂದು ಲೇವಡಿ ಮಾಡಿದ್ದಾರೆ.
ಅವನ್ಯಾವನೋ ಚಂಗಲು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾನೆ ಎಂದು ನನ್ನ ವಿರುದ್ಧ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ನಮ್ಮ ದೇಶದಲ್ಲಿ ದೂರು ನೀಡಲು ಪ್ರತಿಯೊಬ್ಬರಿಗೂ ಹಕ್ಕಿದೆ ನಾನು ಎರಡುಸಾವಿರ ಕೋಟಿ ಹಗರಣದ ಬಗ್ಗೆ ದೂರು ನೀಡಿದ್ದೇನೆ. ಈ ದೂರುಗೆ ನಾನು ಈಗಲು ಬದ್ಧ. ಬೇಕಿದ್ದರೆ ದಾಖಲೆ ಸರಿಯಿಲ್ಲ ಎನ್ನಲಿ. ಅದನ್ನು ಬಿಟ್ಟು ಚಂಗಲು ಎಂಬ ಪದಬಳಕೆ ಸರಿಯಿಲ್ಲ ಎಂದು ಕಿಡಿಕಾರಿದರು.