ಹೆಡ್‌ಫೋನ್ ಇಲ್ಲದೇ ಮೊಬೈಲ್ ಬಳಸಿದರೆ ಈ ಬಸ್‌ ನಲ್ಲಿ ಪ್ರಯಾಣಕ್ಕಿಲ್ಲ ಅವಕಾಶ

ತನ್ನ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮೊಬೈಲ್‌ನಲ್ಲಿ ಜೋರಾದ ಸಂವಹನ ಹಾಗೂ ಹೆಡ್‌ಫೋನ್‌ಗಳಿಲ್ಲದೇ ಆಡಿಯೋ/ವಿಡಿಯೋ ಪ್ಲೇ ಮಾಡುವುದನ್ನು ನಿಷೇಧಿಸಿದ ಬೃಹನ್ಮುಂಬಯಿ ವಿದ್ಯುತ್‌ ಪೂರೈಕೆ ಹಾಗೂ ಸಾರಿಗೆ (ಬೆಸ್ಟ್).

ಪ್ರಯಾಣಿಕರಿಗೆ ಪ್ರಯಾಣದ ವೇಳೆ ಕಿರಿಕಿರಿಯಾಗುವುದನ್ನು ತಪ್ಪಿಸಲು ಬೆಸ್ಟ್‌ ಈ ನಿರ್ಧಾರಕ್ಕೆ ಬಂದಿದೆ. ಪ್ರಯಾಣಿಕರಿಂದ ನಿರಂತರವಾಗಿ ಈ ಸಂಬಂಧ ಬರುತ್ತಿದ್ದ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬೆಸ್ಟ್ ವಕ್ತಾರ ತಿಳಿಸಿದ್ದಾರೆ.

ಸುಮಾರು 3,400ರಷ್ಟು ಬಸ್ಸುಗಳನ್ನು ಹೊಂದಿರುವ ಬೆಸ್ಟ್, ಥಾಣೆ, ನವಿ ಮುಂಬಯಿ ಹಾಗೂ ಮಿರಾ-ಬಯಾಂದರ್‌ ಪ್ರದೇಶದಲ್ಲಿ ಪ್ರತಿನಿತ್ಯ 30 ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ರವಾನೆ ಮಾಡುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read