ಮುಂಬೈನಲ್ಲಿ ಘೋರ ದುರಂತ: ಫಿಲ್ಮ್ ಸಿಟಿ ಬಳಿ ಬೃಹತ್ ಗೋಡೆ ಕುಸಿದು ಇಬ್ಬರು ಸಾವು

ಮುಂಬೈ: ಮುಂಬೈನ ಗೋರೆಗಾಂವ್‌ನಲ್ಲಿ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಆರೆ ಕಾಲೋನಿ ರಸ್ತೆ, ಫಿಲ್ಮ್‌ ಸಿಟಿ ಗೇಟ್ ನಂ.2, ಗೋರೆಗಾಂವ್‌ನ ಪ್ರೈಮ್ ಫಾಕ್ಸ್ ನಿರ್ಮಾಣದ ಹಿಂದೆ ಸಂಜೆ 6:30 ರ ಸುಮಾರಿಗೆ ಅವಘಡ ಸಂಭವಿಸಿದೆ.

ಕುಸಿದ ಗೋಡೆಯು 60 ಅಡಿ ಉದ್ದ ಮತ್ತು 20 ಅಡಿ ಎತ್ತರವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಅಗ್ನಿಶಾಮಕ ದಳದ ಆಗಮನದ ಮೊದಲು ಮೂವರು ಪುರುಷರನ್ನು ರಕ್ಷಿಸಲಾಯಿತು. ಮೂವರ ಪೈಕಿ ಒಬ್ಬನನ್ನು ಖಾಸಗಿ ವಾಹನದಲ್ಲಿ ಟ್ರಾಮಾ ಕೇರ್ ಸೆಂಟರ್‌ಗೆ ಸ್ಥಳಾಂತರಿಸಲಾಗಿದೆ. 32 ವರ್ಷದ ಸಿಂಟು ಮಂಡಲ್ ಮತ್ತು 45 ವರ್ಷದ ಜೈದೇವ್ ಪ್ರಲ್ಹಾದ್ ಬಿಸ್ವಾಸ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

https://twitter.com/ANI/status/1761426200222707748

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read