ಬೈಕ್​ನಲ್ಲಿ 24 ದೇಶಗಳ ಪ್ರಯಾಣಕ್ಕೆ ಯುವಕನ ಸಿದ್ಧತೆ

ಮುಂಬೈನ ಯುವಕ ಯೋಗೀಶ್ ಅಲೆಕಾರಿ ಮುಂಬೈನಿಂದ ಲಂಡನ್​ವರೆಗೆ ಬೈಕ್​ನಲ್ಲಿ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದು, ಅವರು 24 ದೇಶಗಳು ಮತ್ತು 3 ಖಂಡಗಳನ್ನು ದಾಟಿ ಪ್ರಯಾಣಿಸುವ ಗುರಿ ಹೊಂದಿದ್ದಾರೆ.

ಕಳೆದ ಆರೇಳು ವರ್ಷಗಳಿಂದ ಬೈಕ್ ರೈಡಿಂಗ್ ಮಾಡುತ್ತಿರುವ ಇವರು, ಇದುವರೆಗೆ ಭಾರತದಾದ್ಯಂತ ಸುಮಾರು ಒಂದು ಲಕ್ಷ ಕಿಲೋಮೀಟರ್​ಗಳಿಗಿಂತ ಹೆಚ್ಚು ದೂರ ಬೈಕ್ ರೈಡಿಂಗ್ ಮಾಡಿದ್ದಾರೆ.

ಇದೀಗ 24 ದೇಶಗಳು ಮತ್ತು 3 ಖಂಡಗಳಲ್ಲಿ ಪ್ರಯಾಣಿಸಲು ತೀರ್ಮಾನಿಸಿದ್ದು, 25 ಸಾವಿರ ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸುವುದಾಗಿ ಹೇಳಿದ್ದಾರೆ.

ಮಹಾರಾಷ್ಟ್ರ ದಿನವಾದ ಮೇ 1 ರಿಂದ ಈ ಪ್ರಯಾಣ ಆರಂಭವಾಗಲಿದ್ದು, 100 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ. 100 ದಿನಗಳ ಈ ಪ್ರವಾಸಕ್ಕೆ ತಮಗೆ ಸುಮಾರು 30 ಲಕ್ಷ ರೂಪಾಯಿ ಖರ್ಚು ಆಗಲಿದೆ ಎಂದಿರುವ ಯೋಗೀಶ್​, ಬೇರೆ ಬೇರೆ ದೇಶಗಳಿಂದ ವೀಸಾ ಪಡೆಯಬೇಕಾಗಿದೆ. ಏರ್ ಕಾರ್ಗೋ ಮೂಲಕ ಬೈಕ್ ಕಳುಹಿಸಲಾಗುತ್ತದೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read