Viral Video | ಕೆಟ್ಟು ಹೋದ ಬಸ್ ತಳ್ಳಿದ ಪ್ರಯಾಣಿಕರು: ಇದು ನಗರದ ಶಕ್ತಿ ಎಂದು ಮುಂಬೈ ಪೊಲೀಸರ ಟ್ವೀಟ್

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ ಎಂದಿಗೂ ನಿದ್ರಿಸದ ನಗರ ಮತ್ತು ಅದರ ಗದ್ದಲಕ್ಕೆ ಹೆಸರುವಾಸಿಯಾಗಿದೆ. ಇದೀಗ ಕೆಟ್ಟುಹೋದ ಬಸ್ ಅನ್ನು ಪ್ರಯಾಣಿಕರು ತಳ್ಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಗರ ಮತ್ತು ಅದರ ನಾಗರಿಕರ ನಿಜವಾದ ಮನೋಭಾವವನ್ನು ಸೆರೆಹಿಡಿಯುತ್ತದೆ.

ವೈರಲ್ ವಿಡಿಯೋವನ್ನು ಮೆಡೋಹ್ ಅವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ, ಜನರು ಬಿಡುವಿಲ್ಲದ ಸಮಯವನ್ನು ನಿರ್ಲಕ್ಷಿಸಿ, ಒಬ್ಬರಿಗೊಬ್ಬರು ಸಹಾಯ ಮಾಡುವ ಅಮೂಲ್ಯ ಕ್ಷಣ ಇದು. ಎಷ್ಟೇ ತಡವಾದರೂ ಪರವಾಗಿಲ್ಲ, ಒಬ್ಬರಿಗೊಬ್ಬರು ಸಹಾಯ ಮಾಡುವುದನ್ನು ಮರೆಯೋದಿಲ್ಲ ಎಂದು ಟ್ವೀಟ್ ಮಾಡಲಾಗಿದೆ.

ವಿಡಿಯೋದಲ್ಲಿ, ಪ್ರಯಾಣಿಕರು ಫ್ಲೈ ಓವರ್ ಬಳಿ ಕೆಟ್ಟುಹೋದ ಬಸ್ ಅನ್ನು ತಳ್ಳುತ್ತಿರುವುದನ್ನು ನೋಡಬಹುದು. ಮುಂಬೈ ಮೊಮೆಂಟ್ಸ್ ಎಂಬ ಶೀರ್ಷಿಕೆಯೊಂದಿಗೆ ಮುಂಬೈ ಪೊಲೀಸರು ಈ ವಿಡಿಯೋವನ್ನು ಮರುಟ್ವೀಟ್ ಮಾಡಿದ್ದಾರೆ. ಮುಂಬೈನ ಶಕ್ತಿಯು ಅದರ ಪ್ರತಿ ಮುಂಬೈ ನಾಗರಿಕರ ಕೈಯಲ್ಲಿದೆ ಎಂದು ಹೇಳಿದ್ದಾರೆ.

ಬಸ್ ಅನ್ನು ತಳ್ಳಿದ ಜನರು ಮತ್ತು ನಗರದ ಉತ್ಸಾಹವನ್ನು ಶ್ಲಾಘಿಸಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಸ್ಪಿರಿಟ್ ಆಫ್ ಮುಂಬೈ ಎಂದು ಬಳಕೆದಾರರೊಬ್ಬರು ಹೊಗಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read