ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ಕೊಳೆತ ಶವ ಪತ್ತೆ; ಮಗಳು ಅರೆಸ್ಟ್

ಮನುಷ್ಯ ಮನುಷ್ಯನ ಮೇಲೆ ಎಸಗುವ ಕ್ರೌರ್ಯದ ಪರಾಕಾಷ್ಠೆಗಳಿಗೆ ಸೇರುವ ನಿದರ್ಶನವೊಂದರಲ್ಲಿ ಮುಂಬಯಿಯ ಲಾಲ್‌ಬಾಗ್ ಪ್ರದೇಶದಲ್ಲಿ 53 ವರ್ಷದ ಮಹಿಳೆಯ ಕೊಳೆತ ಶವ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಪತ್ತೆಯಾಗಿದೆ.

ವೀಣಾ ಪ್ರಕಾಶ್ ಜೈನ್ ಎಂದು ಮೃತ ವ್ಯಕ್ತಿಯನ್ನು ಗುರುತಿಸಲಾಗಿದೆ. ತನ್ನ ಸಹೋದರಿ ಮಂಗಳವಾದರಿಂದ ಕಾಣೆಯಾಗಿದ್ದಾರೆ ಎಂದು ಆಕೆಯ ಸಹೋದರ ದೂರು ನೀಡಿದ್ದರು. ಆದರೆ ವೀಣಾ ಕಳೆದ ಎರಡು ತಿಂಗಳಿನಿಂದ ಮಿಸ್ಸಿಂಗ್ ಆಗಿದ್ದರು ಎಂದು ಆಕೆಯ ನೆರೆಹೊರೆಯ ಮಂದಿ ತಿಳಿಸಿದ್ದಾರೆ. ಕಾಲಾ ಚೌಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಲಾಲ್‌ಬಾಗ್ ಪ್ರದೇಶದ ಪೆರು ಕಾಂಪೌಂಡ್‌ನಲ್ಲಿ ಪ್ಲಾಸ್ಟಿಕ್ ಬ್ಯಾಗ್‌ವೊಂದರಲ್ಲಿ ಸುತ್ತಿಡಲಾಗಿದ್ದ ವೀಣಾರ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೂಡಲೇ ವೀಣಾರ 22 ವರ್ಷ ವಯಸ್ಸಿನ ಮಗಳನ್ನು ಬಂಧಿಸಿರುವ ಪೊಲೀಸರು ಆಕೆಯನ್ನು ಪ್ರಶ್ನಿಸಿದ್ದಾರೆ. ವೀಣಾಳ ಸಹೋದರ ಹಾಗೂ ಆತನ ಪುತ್ರನನ್ನು ಸಹ ವಶಕ್ಕೆ ಪಡೆದಿರುವ ಪೊಲೀಸರು ಅವರನ್ನೂ ಪ್ರಶ್ನಿಸಿದ್ದಾರೆ.

ಮೃತರ ಕಾಲುಗಳನ್ನು ಕೊಚ್ಚಿಹಾಕಲಾಗಿದ್ದು, ಆಕೆಯ ಸಾವಿಗೆ ಕಾರಣವೇನೆಂದು ಇನ್ನಷ್ಟೇ ತಿಳಿಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read