ವಾಣಿಜ್ಯ ನಗರಿ ಮುಂಬೈನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಗ್ರಾಂಟ್ ರಸ್ತೆಯ ಬಳಿ ಶೇರಿಂಗ್ ಟ್ಯಾಕ್ಸಿ ಹತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರಿಗೆ ಕಿರುಕುಳ ನೀಡಲಾಗಿದೆ.
ಇದೇ ಟ್ಯಾಕ್ಸಿಯಲ್ಲಿ ಆಕೆಯ ಪಕ್ಕ ಕುಳಿತಿದ್ದ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಘಟನೆಯು ಆನ್‌ಲೈನ್‌ನಲ್ಲಿ ಗಮನ ಸೆಳೆದ ನಂತರ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಗ್ರಾಂಟ್ ರಸ್ತೆಯ ಸೋಫಿಯಾ ಕಾಲೇಜ್ ಬಳಿ ಶೇರ್ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಈ ಆಘಾತಕಾರಿ ಅನುಭವವಾಗಿದೆ.
ಆಕೆಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಅಶ್ಲೀಲ ವರ್ತನೆ ತೋರಿದ್ದು, ಆಕೆಗೆ ಮಾನಸಿಕ ಕಿರುಕುಳ ನೀಡಿದ್ದಾನೆ. ವಿದ್ಯಾರ್ಥಿನಿ ಶೇರಿಂಗ್ ಟ್ಯಾಕ್ಸಿಯಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ, ಇದೇ ಟ್ಯಾಕ್ಸಿ ಹತ್ತಿದ್ದ ವ್ಯಕ್ತಿ ಬಹಿರಂಗವಾಗಿ ಹಸ್ತಮೈಥುನ ಮಾಡಿಕೊಂಡಿದ್ದಾನೆ.
ಇದರಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ಮಾನಸಿಕ ಹಿಂಸೆ ಅನುಭವಿಸಿದ್ದು, ಬಳಿಕ ಧೈರ್ಯ ತಂದುಕೊಂಡ ಆಕೆ ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ಮುಂಬೈ ಪೊಲೀಸರು ದೂರನ್ನು ಒಪ್ಪಿಕೊಂಡಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
We have followed you. Please share your contact details in DM.
— मुंबई पोलीस – Mumbai Police (@MumbaiPolice) December 11, 2024