ಕಳ್ಳಸಾಗಣೆ ವೇಳೆ ಜಿಂಬಾಬ್ವೆಯಲ್ಲಿ ಸಿಕ್ಕಿಬಿದ್ದ ಮುಂಬೈ ಮಹಿಳೆ; ಕಣ್ಣೀರ ಕಥೆ ಬಿಚ್ಚಿಟ್ಟ ಕುಟುಂಬಸ್ಥರು

ಜಿಂಬಾವ್ವೆ: ಕಳೆದ ವರ್ಷ ಅಕ್ಟೋಬರ್‌ನಲ್ಲಿ 9.2 ಕೆಜಿ ಮಾದಕ ದ್ರವ್ಯಗಳನ್ನು ಅಕ್ರಮವಾಗಿ ಹೊಂದಿದ್ದಕ್ಕಾಗಿ ಜಿಂಬಾಬ್ವೆ ಪೊಲೀಸರು 45 ವರ್ಷದ ಮುಂಬೈನ ನಲಸೋಪಾರಾ ನಿವಾಸಿ ಮಹಿಳೆಯನ್ನು ಬಂಧಿಸಿದ್ದರು. ಆಕೆಯೀಗ ಕಾರಾಗೃಹದಲ್ಲಿದ್ದಾರೆ.

ಬಂಧಿತ ಮಹಿಳೆಗೆ ಆಫ್ರಿಕನ್ ದೇಶದಿಂದ ಮುಂಬೈಗೆ ಬ್ಯಾಗ್ ತರುವ ಕೆಲಸ ನೀಡಲಾಗಿತ್ತು ಮತ್ತು ಬ್ಯಾಗ್‌ನಲ್ಲಿರುವ ವಿಷಯಗಳ ಬಗ್ಗೆ ಆಕೆಗೆ ತಿಳಿದಿಲ್ಲ ಎಂದು ಆಕೆಯ ಕುಟುಂಬ ಸದಸ್ಯರು ಹೇಳಿದ್ದಾರೆ. ನಲಸೋಪಾರಾದ ಅದೇ ಕಟ್ಟಡದಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ವಿದೇಶಿ ಪ್ರಜೆಯೊಬ್ಬರು ಆಕೆಗೆ ಕೆಲಸ ನೀಡಿದ್ದು, ವೀಸಾ ಮತ್ತು ವಿಮಾನ ಟಿಕೆಟ್‌ಗಳಿಗೆ ಹಣ ಪಾವತಿಸಿದ್ದಾರೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಬಂಧಿತ ಮಹಿಳೆ ಹೆಸರು ಜೀನತ್ ಖಾತುನ್ ರಫೀಕ್ ಶೇಖ್. ಈಕೆಗೆ 19 ಮತ್ತು 17 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು ಮತ್ತು 16 ವರ್ಷದ ಮಗ ಇದ್ದಾರೆ. ಎಲ್ಲರೂ ನಲಸೋಪಾರ ಪಶ್ಚಿಮದ ಹನುಮಾನ್ ನಗರದಲ್ಲಿರುವ ಸಿಲ್ವರ್ ಪ್ಲಾಜಾ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಅದೇ ಕಟ್ಟಡದ ನಿರ್ವಹಣೆಯನ್ನು ನೋಡಿಕೊಂಡು ಮಹಿಳೆ ಸ್ವಲ್ಪ ಹಣವನ್ನು ಸಂಪಾದಿಸುತ್ತಿದ್ದಳು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ತನ್ನ ಹಿರಿಯ ಮಗಳ ಮದುವೆಯನ್ನು ನಿಗದಿಪಡಿಸಿದ ನಂತರ ಕುಟುಂಬದ ಏಕೈಕ ಸಂಪಾದನೆ ಸದಸ್ಯೆಯಾದ ಆಕೆಗೆ ಹಣದ ಅವಶ್ಯಕತೆ ಇತ್ತು.

ಆಕೆಯ ಕುಟುಂಬ ಸದಸ್ಯರ ಪ್ರಕಾರ, ಆ ಸಮಯದಲ್ಲಿ ಕಟ್ಟಡದ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ವಿದೇಶಿ ಪ್ರಜೆಯೊಬ್ಬರು ಜಿಂಬಾಬ್ವೆಗೆ ಹೋಗಿ ಪಾರ್ಸೆಲ್ ಸಂಗ್ರಹಿಸುವ ಕೆಲಸವನ್ನು ನೀಡಿದರು. ಮಹಿಳೆ ಕೆಲಸಕ್ಕೆ ಒಪ್ಪಿಕೊಂಡಳು. ಕಳೆದ ವರ್ಷ ಸೆಪ್ಟೆಂಬರ್ 20 ರಂದು ಆಫ್ರಿಕನ್ ದೇಶಕ್ಕೆ ತೆರಳಿದ್ದಳು. ಆ ಸಮಯದಲ್ಲಿ 9.2 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡ ನಂತರ ವಿಕ್ಟೋರಿಯಾ ಫಾಲ್ಸ್ ವಿಮಾನ ನಿಲ್ದಾಣದಿಂದ ಜಿಂಬಾಬ್ವೆ ಡ್ರಗ್ಸ್ ಮತ್ತು ನಾರ್ಕೋಟಿಕ್ಸ್ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಭಾರತಕ್ಕೆ ಕಳ್ಳಸಾಗಣೆ ಮಾಡಲು ಉದ್ದೇಶಿಸಿದ್ದರಿಂದ ಬಂಧನವಾಗಿದೆ. ಈಗ ಕುಟುಂಬಸ್ಥರು ಕಣ್ಣೀರ ಕಥೆಯನ್ನು ಹೇಳಿದ್ದು, ಮುಂದೇನಾಗುತ್ತದೆಯೋ ಕಾದು ನೋಡಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read