ವ್ಯಕ್ತಿ ಸಾವಿಗೆ ಕಾರಣವಾಯ್ತು ಒಂದೇ ಒಂದು ಮಾವಿನ ಹಣ್ಣು….!

Mumbai: Man steals mango, dies in freak accident in Charkop

ಮುಂಬೈನ ಕಂಡಿವಲಿ ಪಶ್ಚಿಮದಲ್ಲಿ ಒಂದೇ ಒಂದು ಮಾವಿನಹಣ್ಣು ಕದ್ದ 52 ವರ್ಷದ ವ್ಯಕ್ತಿ ತಪ್ಪಿಸಿಕೊಳ್ಳಲು ಯತ್ನಿಸ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಪೊಲೀಸರ ಪ್ರಕಾರ ಮಾವು ಕಳ್ಳನನ್ನು ಹಿಂಬಾಲಿಸುವಾಗ, ಮಾರಾಟಗಾರ ಆತನ ತಲೆಗೆ ಹೊಡೆದ ಪರಿಣಾಮ ಮಾರಣಾಂತಿಕವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಚಾರ್ಕೋಪರ್ ಪೊಲೀಸರು ನಿರ್ಲಕ್ಷ್ಯದ ಸಾವು ಎಂದು ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಆರೋಪಿಯಾದ ಮಾವು ಮಾರಾಟಗಾರನನ್ನು ಬಂಧಿಸಿದ್ದಾರೆ.

ಮೃತ ಮಾರುತಿ ಮೇಧೆ ಕಂಡಿವಲಿ ಪಶ್ಚಿಮದ ಚಾರ್ಕೋಪರ್ ನಿವಾಸಿ. ಆರೋಪಿ ಸೋನು ಗುಪ್ತಾ ಕಂಡಿವಲಿ ಪಶ್ಚಿಮದ ಚಾರ್ಕೋಪರ್ ‌ನಲ್ಲಿ ಹಣ್ಣಿನ ಅಂಗಡಿಯನ್ನು ನಡೆಸುತ್ತಿದ್ದಾರೆ. ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಪೋಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಮೃತ ಮಾರುತಿ ಮೇಧೆ ಟಿಬಿ, ನ್ಯುಮೋನಿಯಾ ಮತ್ತು ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಕಂಡುಬಂದಿದೆ. ಈ ರೀತಿಯ ಅನಾರೋಗ್ಯ ಪರಿಸ್ಥಿತಿ ಮತ್ತು ತಲೆಗೆ ಪೆಟ್ಟಾದ ಕಾರಣ ಅವರು ನಿಧನರಾದರು. ನಾವು ಐಪಿಸಿ ಸೆಕ್ಷನ್ 304 (2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಆರೋಪಿಯನ್ನು ಬಂಧಿಸಿದ್ದೇವೆ ಎಂದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read