ಚಲಿಸುತ್ತಿದ್ದ ಆಟೋದಲ್ಲೇ ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿದ ಪಾಪಿ

ಮುಂಬೈ: ಚಲಿಸುತ್ತಿದ್ದ ಆಟೋದಲ್ಲಿ ಕೊಲೆ ನಡೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಜೋಡಿಯೊಂದು ಪ್ರಯಾಣಿಸುತ್ತಿತ್ತು. ವೈಯಕ್ತಿಕ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕುಪಿತಗೊಂಡ ವ್ಯಕ್ತಿ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆರೋಪಿ ಕಟರ್ ಬಳಸಿ ಈಕೆಯ ಕತ್ತು ಸೀಳಿದ್ದಾನೆ.

ಕೃತ್ಯವೆಸಗಿದ ನಂತರ ಚಲಿಸುತ್ತಿದ್ದ ಆಟೋದಿಂದ ಜಿಗಿದು ಪರಾರಿಯಾಗಿದ್ದಾನೆ. ಸ್ವಲ್ಪ ದೂರದಲ್ಲಿ ಪೊಲೀಸರು ಇದ್ದುದರಿಂದ ಆತ ಸಿಕ್ಕಿಬಿದ್ದಿದ್ದಾನೆ. 30 ವರ್ಷದ ಪಂಚಶಿಲಾ ಅಶೋಕ್ ಜಾಮ್ದಾರ್ ಎಂಬ ಮಹಿಳೆ ಕೊಲೆಯಾದವರು. ಈಕೆ ಮುಂಬೈನ ಸಾಕಿನಾಕಾದಲ್ಲಿರುವ ಚಂಡಿವಾಲಿ ಪ್ರದೇಶದ ಸಂಘರ್ಷನಗರ ನಿವಾಸಿ.

ಮಾಹಿತಿ ಪ್ರಕಾರ ಮುಂಬೈನ ಸಾಕಿನಾಕಾ ಪ್ರದೇಶದ ಖೈರಾನಿ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕೊಲೆ ನಡೆದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಇಬ್ಬರ ನಡುವೆ ಜಗಳ ನಡೆದಿದೆ. ಆ ವ್ಯಕ್ತಿ ಚಾಕುವಿನಿಂದ ಆತನ ಗೆಳತಿಯ ಕೊಲೆ ಮಾಡಿದ್ದಾನೆ. ಇದಾದ ನಂತರ ಚಲಿಸುತ್ತಿದ್ದ ಆಟೋ ರಿಕ್ಷಾದಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು ಎಂದು ವಲಯ 10 ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ದತ್ತಾ ನಲವಾಡೆ ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read