ಪಂಚತಾರಾ ಹೋಟೆಲ್‌ ನಲ್ಲಿ ಊಟ ಮಾಡಿ ನಾಣ್ಯದಲ್ಲಿ ಬಿಲ್‌ ಕೊಟ್ಟ ಭೂಪ…!

ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಹೊಟ್ಟೆ ತುಂಬಾ ತಿನ್ನಬೇಕು ಅನ್ನೋ ಆಸೆ ತುಂಬಾ ಜನರಿಗೆ ಇರುತ್ತೆ. ಆದರೆ ತಿಂದಾದ್ಮೇಲೆ ಬಿಲ್ ಕೊಡೋದಕ್ಕೆ ಜೇಬು ತುಂಬಾ ಗರಿ ಗರಿ ನೋಟಿರಲ್ಲಾ ಅಷ್ಟೆ. ಇಲ್ಲೊಬ್ಬ ವ್ಯಕ್ತಿ ಫೈವ್ ಸ್ಮಾರ್ ಹೋಟೆಲ್‌ ತಾಜ್‌ಗೆ ಹೋಗಿ ತನಗೆ ಬೇಕಾಗಿದ್ದನ್ನು ತಿಂದು ಬಿಲ್ ಕೊಟ್ಟು ಬಂದಿದ್ದಾನೆ. ಆದರೆ ಈತ ಬಿಲ್ ಕೊಟ್ಟ, ಪರಿ ಮಾತ್ರ, ಸುತ್ತಮುತ್ತಲಿದ್ದವರನ್ನೆಲ್ಲ ಶಾಕ್ ಮಾಡಿದೆ. ಅದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇವರೇ ನೋಡಿ ಮಿಸ್ಟರ್ ಸಿದ್ದೇಶ್. ಇವರದ್ದೆ ವಿಡಿಯೋ ಈಗ ವೈರಲ್ ಆಗಿರೋದು. ಇನ್‌ಸ್ಟಾಗ್ರಾಮ್‌ನ ಸಿದಿಮ್ನಲಿ ಅನ್ನೋ ಅಕೌಂಟ್‌ನಲ್ಲಿ ಇವರು ತಮ್ಮ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ಶೀರ್ಷಿಕೆಯಲ್ಲಿ ‘ಗೆಳೆಯರೇ, ತಾಜ್ ಹೋಟೆಲ್‌ಗೆ ಹೋಗಿ, ಅಲ್ಲಿ ಮಹಾನ್ ಕೆಲಸ ಮಾಡ್ಬಂದೆ. ಬಿಲ್ ಕೊಡೋದು ಮುಖ್ಯ, ಅದನ್ನ ಡಾಲರ್‌ ನಲ್ಲಾದ್ರೂ ಕೂಡಿ, ಇಲ್ಲಾ ಚಿಲ್ಲರೆನಲ್ಲಾದ್ರೂ ಕೊಡಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನ ಓದಿದ ಮೇಲೆ ನಿಮಗೂ ಅರ್ಥವಾಗಿರುತ್ತೆ ಇವರು ಮಾಡಿದ ಕೆಲಸ ಎನು ಅಂತ. ಅಸಲಿಗೆ ಸಿದ್ದೇಶ್ ಸೂಟ್ ನ್ನ ಹಾಕ್ಕೊಂಡು, ಹೋಟೆಲ್ ತಾಜ್‌ಗೆ ಹೋಗಿದ್ದಾರೆ. ಅಲ್ಲಿ ಪಿಡ್ಜಾ ಮತ್ತು ಮಾಕ್ಟೇಲ್‌ನ್ನ ಆರ್ಡರ್ ಮಾಡಿ ತಿಂದಿದ್ದಾರೆ. ಆ ನಂತರ ವೇಟರ್ ಬಿಲ್ ತಂದು ಮುಂದಿಟ್ಟಿದ್ದಾನೆ.

ಬಿಲ್ ನೋಡಿ ತಕ್ಷಣವೇ ಸಿದ್ದೇಶ್ ತಮ್ಮ ಬಳಿ ಇರುವ ಚೀಲವನ್ನ ತೆಗೆಯುತ್ತಾರೆ. ಆ ಚೀಲ ನಾಣ್ಯಗಳ ರಾಶಿಯಿಂದ ತುಂಬಿರುತ್ತೆ. ಸಿದ್ದೇಶ್ ಚೀಲ ನೋಡಿದಾಕ್ಷಣ ವೇಟರ್ ಅಷ್ಟೇ ಅಲ್ಲ ಸುತ್ತಮುತ್ತಲಿದ್ದವರೆಲ್ಲ ಸ್ವಲ್ಪ ಕನ್ಫ್ಯೂಸ್ ಆಗುತ್ತಾರೆ. ಆದರೆ ಅದೇ ಚೀಲದಲ್ಲಿರುವ ನಾಣ್ಯಗಳನ್ನ ಎಣಿಸಿ ಕೊಟ್ಟು, ಬಿಲ್ ಕಟ್ಟುತ್ತಾರೆ.

ಈ ವಿಡಿಯೋ ಈಗಾಗಲೇ 1.1 ಮಿಲಿಯನ್‌ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 1.25 ಮಿಲಿಯನ್ ಜನರು ಇದನ್ನ ಇಷ್ಟಪಟ್ಟು ಕಾಮೆಂಟ್ ಮಾಡಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡ್‌ನಲ್ಲಿರುವ ವಿಡಿಯೋ ಇದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read