ಭೂಗತ ಪಾತಕಿ ಅರುಣ್ ಗಾವ್ಳಿ ಕುಟುಂಬ ಸದಸ್ಯರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರ್ಪಡೆ

ಮುಂಬೈ ಭೂಗತ ಲೋಕದ ಕುಖ್ಯಾತ ಪಾತಕಿ ಅರುಣ್ ಗಾವ್ಳಿ ಕುಟುಂಬದ ಇಬ್ಬರು ಪ್ರಮುಖ ಸದಸ್ಯರು ಶನಿವಾರ ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರ್ಪಡೆಗೊಂಡಿದ್ದಾರೆ.

ವಂದನಾ ತಾಯ್ ಪ್ರದೀಪ್ ಗಾವ್ಳಿ ಹಾಗೂ ಯುವ ನಾಯಕ ಪ್ರದೀಪ್ ಗುಲಾಬ್ ಗಾವ್ಳಿ ಶಿವಸೇನೆ ಸೇರ್ಪಡೆಗೊಂಡವರಾಗಿದ್ದು, ಇನ್ನೂ ಹಲವರು ಅರುಣ್ ಗಾವ್ಳಿ ನೇತೃತ್ವದ ಅಖಿಲ ಭಾರತೀಯ ಸೇನಾ ಪಕ್ಷ ತೊರೆದು ಶಿವಸೇನೆ ಅಥವಾ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

1970ರ ದಶಕದಲ್ಲಿ ಮುಂಬೈ ಭೂಗತ ಜಗತ್ತು ಪ್ರವೇಶಿಸಿದ ಅರುಣ್ ಗಾವ್ಳಿ ಮತ್ತಾತನ ಸಹೋದರ ಕಿಶೋರ್ ‘ಬೈಕುಲ್ಲಾ ಕಂಪನಿ’ ಗ್ಯಾಂಗ್ ಸೇರ್ಪಡೆಗೊಂಡಿದ್ದರು. ಮಾರ್ಚ್ 2007ರಲ್ಲಿ ನಡೆದಿದ್ದ ಶಿವಸೇನೆ ಕಾರ್ಪೊರೇಟರ್ ಕಮಲಾಕರ್ ಹತ್ಯೆ ಪ್ರಕರಣದಲ್ಲಿ ಅರುಣ್ ಗಾವ್ಳಿಗೆ ನ್ಯಾಯಾಲಯದಿಂದ ಶಿಕ್ಷೆ ವಿಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read