ಮಾಜಿ ಪತಿಯೊಂದಿಗೆ ಹೋಗಲು ಸ್ವಂತ ಮನೆಯನ್ನೇ ದೋಚಿದ ಮಹಿಳೆ; 9 ತಿಂಗಳ ಬಳಿಕ ಅರೆಸ್ಟ್

ಮಹಿಳೆಯೊಬ್ಬಳು ತನ್ನ ಮಾಜಿ ಪತಿಯೊಂದಿಗೆ ಹೋಗುವ ಸಲುವಾಗಿ ತಾನು ವಾಸವಾಗಿದ್ದ ಎರಡನೇ ಪತಿಯ ಮನೆಯನ್ನೇ ದೋಚಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದ್ದು, ಒಂಬತ್ತು ತಿಂಗಳ ಬಳಿಕ ಪ್ರಕರಣ ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೇ 7, 2022 ರಲ್ಲಿ ಮುಂಬೈನ ಪೂರ್ವ ಮಲಾಡ್ ಪ್ರದೇಶದಲ್ಲಿನ ಓಂಕಾರ್ ಅಪಾರ್ಟ್ಮೆಂಟ್ ನಲ್ಲಿ 8.5 ಲಕ್ಷ ರೂಪಾಯಿ ಮೌಲ್ಯದ ನಗ, ನಗದು ಕಳುವಾಗಿತ್ತು. ಮಹಿಳೆ ಮತ್ತು ಆಕೆಯ ಎರಡನೇ ಪತಿ ಸಂಬಂಧಿಗಳ ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿತ್ತು.

ವಾಸ್ತವವಾಗಿ ಮಹಿಳೆ ತನ್ನ ಎರಡನೇ ಪತಿ ಕಾರ್ ವಾಶ್ ಮಾಡಿಸಿಕೊಂಡು ಬರಲು ಹೋಗಿದ್ದಾಗ ಲಾಕರ್ ಒಡೆದು ನಗ – ನಗದು ದೋಚಿದ ಬಳಿಕ ಹೊರಗಿನಿಂದ ಮುಖ್ಯದ್ವಾರದ ಕೀ ಹಾಕಿದ್ದಳು. ದಂಪತಿ ಮೇ 13ರಂದು ಮನೆಗೆ ಬಂದಾಗ ಕಳವು ನಡೆದಿರುವುದು ಗೊತ್ತಾಗಿತ್ತು.

ಆಕೆಯ ಎರಡನೇ ಪತಿ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದು, ಪೊಲೀಸರು ಮನೆಯ ಮುಂಬಾಗಿಲು ಒಡೆಯದೇ ಇರುವುದನ್ನು ಗಮನಿಸಿದ್ದರಲ್ಲದೆ ಕೇವಲ ಲಾಕರ್ ಮಾತ್ರ ಒಡೆದು ಹಾಕಿದ್ದು, ಅನುಮಾನಕ್ಕೆ ಕಾರಣವಾಗಿತ್ತು.

ಹೀಗಾಗಿ ಹಲವು ಸುಳಿವುಗಳನ್ನು ಪಡೆದು ಅಂತಿಮವಾಗಿ ಗುರುವಾರದಂದು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊದಲ ಪತಿ ಹಾಗೂ ಮಗನ ಜೊತೆ ಸೇರಲು ತಾನು ಈ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೆ ಆಕೆಯ ಮೊದಲ ಪತಿ ಹಾಗೂ ಮಗ ಸಹ ಇದರಲ್ಲಿ ಶಾಮೀಲಾಗಿರುವುದು ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read