ಹೋಳಿ ಪಾರ್ಟಿ ಬಳಿಕ ಬಾತ್ ರೂಂ ನಲ್ಲಿ ಶವವಾಗಿ ದಂಪತಿ ಪತ್ತೆ

ಹೋಳಿ ಆಚರಣೆ ಬಳಿಕ ಮುಂಬೈನಲ್ಲಿ ದಂಪತಿ ತಮ್ಮ ಮನೆಯ ಬಾತ್ ರೂಂ ನಲ್ಲಿ ನಿಗೂಢವಾಗಿ ಸಾವನ್ನಪ್ಪಿರೋ ಘಟನೆ ಬೆಳಕಿಗೆ ಬಂದಿದೆ.
ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಬುಧವಾರ ದಂಪತಿ ತಮ್ಮ ನಿವಾಸದ ಸ್ನಾನಗೃಹದೊಳಗೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಾಟ್ಕೋಪರ್ ಪ್ರದೇಶದ ಕುಕ್ರೇಜಾ ಕಟ್ಟಡದಲ್ಲಿ ದಂಪತಿ ವಾಸವಾಗಿದ್ದರು. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ದಂಪತಿ ಮನೆಯಲ್ಲಿ ಕೆಲಸ ಮಾಡುವ ಸೇವಕಿ ಶವಗಳನ್ನು ನೋಡಿ ತಕ್ಷಣ ಸಂಬಂಧಿಕರಿಗೆ ತಿಳಿಸಿದ್ದಾರೆ. ಮನೆಯ ನಕಲಿ ಕೀಗಳನ್ನು ಹೊಂದಿದ್ದ ಸೇವಕಿ ಸಂಬಂಧಿಕರಿಗೆ ತಿಳಿಸಿದ್ದರು. ಅವರು ಪೊಲೀಸರಿಗೆ ಮಾಹಿತಿ ನೀಡಿದರು.

ಪಂತ್ ನಗರ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ . ಪತಿಗೆ 42 ವರ್ಷ ಮತ್ತು ಪತ್ನಿಗೆ 39 ವರ್ಷ ವಯಸ್ಸಾಗಿದ್ದು, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read