ವಿಮಾನದಲ್ಲೇ ಮದ್ಯಸೇವಿಸಿ ಸಿಬ್ಬಂದಿ, ಪ್ರಯಾಣಿಕರ ನಿಂದಿಸಿದ ಇಬ್ಬರು ಅರೆಸ್ಟ್

ಮುಂಬೈ: ಇಂಡಿಗೋ ವಿಮಾನದಲ್ಲಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರನ್ನು ನಿಂದಿಸಿದ ಇಬ್ಬರು ಪಾನಮತ್ತ ಪ್ರಯಾಣಿಕರನ್ನು ಬಂಧಿಸಲಾಗಿದೆ.

ದುಬೈನಿಂದ ಮುಂಬೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವಾಗ ಕುಡಿದು ಸಿಬ್ಬಂದಿ ಮತ್ತು ಸಹ ಪ್ರಯಾಣಿಕರನ್ನು ನಿಂದಿಸಿದ ಇಬ್ಬರನ್ನು ಬುಧವಾರ ಬಂಧಿಸಲಾಗಿದೆ.

ಜಾನ್ ಜಿ ಡಿಸೋಜಾ(49) ಮತ್ತು ದತ್ತಾತ್ರೇಯ ಬಾಪರ್ಡೇಕರ್(47) ಎಂದು ಗುರುತಿಸಲಾದ ಪ್ರಯಾಣಿಕರು ದುಬೈನಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರ ಭಾರತಕ್ಕೆ ಮರಳುತ್ತಿದ್ದರು. ಅವರು ಡ್ಯೂಟಿ-ಫ್ರೀನಿಂದ ಖರೀದಿಸಿದ ಅರ್ಧ ಬಾಟಲಿಯ ಮದ್ಯವನ್ನು ಸೇವಿಸಿದ್ದರು.

ಅವರ ಪಕ್ಕದಲ್ಲಿ ಕುಳಿತಿರುವ ಪ್ರಯಾಣಿಕರು  ಅವರ ನಿರಂತರ ಮದ್ಯಪಾನ ವಿರೋಧಿಸಿದಾಗ ಅವರು ನಿಂದಿಸಿದ್ದಾರೆ ಎಂದು ಸಹರ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಸೋಜಾ ನಲಸೋಪಾರ ಮೂಲದವರಾಗಿದ್ದರೆ, ಬಾಪರ್ಡೇಕರ್ ಕೊಲ್ಲಾಪುರದ ಮಾನ್ಬೆಟ್‌ಗೆ ಸೇರಿದವರು.

ವಿಮಾನ ನಿಯಮಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ. ಆದರೆ ಸೆಕ್ಷನ್‌ಗಳು ಜಾಮೀನು ನೀಡಬಹುದಾದ ಕಾರಣ, ಅವರಿಗೆ ಪೊಲೀಸ್ ಠಾಣೆಯಿಂದಲೇ ಜಾಮೀನು ನೀಡಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ದೀಕ್ಷಿತ್ ಗೆಡಮ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read