ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿ ಸಾವಿನ ಬಗ್ಗೆ ಪುತ್ರನಿಂದ ಸ್ಪೋಟಕ ಹೇಳಿಕೆ: ವಿಷವುಣಿಸಿ ಹತ್ಯೆ ಎಂದ ಉಮರ್ ಅನ್ಸಾರಿ

ಉತ್ತರ ಪ್ರದೇಶದ ಬಂದಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ದರೋಡೆಕೋರ-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಪುತ್ರ ಉಮರ್ ಅನ್ಸಾರಿ, ತನ್ನ ತಂದೆಗೆ ಆಹಾರದಲ್ಲಿ ವಿಷ ನೀಡಿದ್ದಾರೆ. ನಾವು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ಮುಖ್ತಾರ್ ಅನ್ಸಾರಿ ಅವರು ಹೃದಯಾಘಾತದಿಂದ ಆರೋಗ್ಯ ಹದಗೆಟ್ಟ ಕಾರಣ ಗುರುವಾರ ನಿಧನರಾದರು. ಜೈಲಿನಲ್ಲಿದ್ದ ದರೋಡೆಕೋರನನ್ನು ಗಾಜಿಪುರದ ಬಂದಾದಲ್ಲಿರುವ ಬಂದಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ಮಂಗಳವಾರ ಸಹ, ಅನ್ಸಾರಿ ಅವರು ಹೊಟ್ಟೆ ನೋವಿನ ಬಗ್ಗೆ ಹೇಳಿಕೊಂಡಾಗ ಆಸ್ಪತ್ರೆಗೆ ಕರೆದೊಯ್ದು ಸುಮಾರು 14 ಗಂಟೆಗಳ ಕಾಲ ದಾಖಲಿಸಲಾಯಿತು.

ಉಮರ್ ಅನ್ಸಾರಿ ಹೇಳಿಕೆ

ತಂದೆಯ ಸಾವಿನ ಬಗ್ಗೆ ನನಗೆ ಅಧಿಕಾರಿಗಳ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಮಾಧ್ಯಮಗಳ ಮೂಲಕ ನನಗೆ ವಿಷಯ ತಿಳಿದಿದೆ. ಎರಡು ದಿನಗಳ ಹಿಂದೆ ನಾನು ಅವರನ್ನು ಭೇಟಿಯಾಗಲು ಬಂದಿದ್ದೇನೆ. ಆದರೆ ನನಗೆ ಅವಕಾಶ ನೀಡಲಿಲ್ಲ. ನಾವು ಮೊದಲೇ ಹೇಳಿದಂತೆ ಸ್ಲೋ ಪಾಯ್ಸನ್ ನೀಡಿದ ಆರೋಪದ ಬಗ್ಗೆ ಮತ್ತೆ ಹೇಳುತ್ತೇವೆ. ಮಾರ್ಚ್ 19 ರಂದು ಅವರು ರಾತ್ರಿಯ ಊಟದಲ್ಲಿ ವಿಷ ಸೇವಿಸಿದ್ದಾರೆ. ನಾವು ನ್ಯಾಯಾಂಗದ ಮೊರೆ ಹೋಗುತ್ತೇವೆ, ನಮಗೆ ಅದರಲ್ಲಿ ಸಂಪೂರ್ಣ ನಂಬಿಕೆ ಇದೆ ಎಂದು ಉಮರ್ ಅನ್ಸಾರಿ ಹೇಳಿದರು.

ದರೋಡೆಕೋರ-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ದೇಹವನ್ನು ಬಂಡಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಅವರು ದೇಹವನ್ನು ನಮಗೆ ನೀಡುತ್ತಾರೆ. ನಂತರ ನಾವು ಮುಂದಿನ ಪ್ರಕ್ರಿಯೆಯನ್ನು(ಶವಸಂಸ್ಕಾರ) ನಡೆಸುತ್ತೇವೆ. ನನ್ನ ತಂದೆಗೆ ಸ್ಲೋ ಪಾಯ್ಸನ್ ನೀಡಿದ್ದಾರೆ ಎಂದು ಆರೋಪಿಸಿದರು.

ಇದಕ್ಕೂ ಮೊದಲು, ಅನ್ಸಾರಿಯವರ ಸಹೋದರ ಮತ್ತು ಘಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಅವರು ಮಂಗಳವಾರ ಅಧಿಕಾರಿಗಳು ಅವರನ್ನು ಜೈಲಿನಲ್ಲಿ “ಸ್ಲೋ ಪಾಯ್ಸನಿಂಗ್” ಗೆ ಒಳಪಡಿಸಿದ್ದಾರೆ ಎಂದು ಆರೋಪಿಸಿದ್ದರು, ಇದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.

https://twitter.com/ANI/status/1773448694320496702

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read