ದೀಪಾವಳಿ ಹಬ್ಬಕ್ಕೆ ಜಿಯೋ ಭರ್ಜರಿ ಗಿಫ್ಟ್; ವಾಟ್ಸಾಪ್, ಯೂಟ್ಯೂಬ್ ಲಭ್ಯವಿರುವ ಅತಿ ಕಡಿಮೆ ಬೆಲೆಯ 4ಜಿ ಮೊಬೈಲ್ ರಿಲೀಸ್

Mukesh Ambani Recieve Death Threat Again Now 200 Crore Rupees Demanded By Email As Ransom ANN | 'पिछली मेल का जवाब नहीं दिया तो अब 200 करोड़ दो', मुकेश अंबानी को फिर

ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮೊಬೈಲ್ ಬಳಕೆದಾರರಿಗೆ ದೀಪಾವಳಿ ಗಿಫ್ಟ್ ಕೊಟ್ಟಿದ್ದಾರೆ. ಪ್ರತಿ ಬಾರಿ ದೀಪಾವಳಿ ಹಬ್ಬದ ಸಮಯದಲ್ಲಿ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮುಖೇಶ್ ಅಂಬಾನಿ ಒಡೆತನದ ಭಾರತದ ಅತಿ ದೊಡ್ಡ ಟೆಲಿಕಾಂ ನೆಟ್ ವರ್ಕ್ ರಿಲಯನ್ಸ್ ಜಿಯೋ ಮತ್ತೊಮ್ಮೆ ಕಡಿಮೆ ಬೆಲೆಯ ಮೊಬೈಲ್ ಬಿಡುಗಡೆ ಮಾಡಿದೆ.
ಭಾರತದಲ್ಲಿ ಕೈಗೆಟುಕುವ ಬೆಲೆಯ ಜಿಯೋ ಫೋನ್ ಪ್ರೈಮ 4G ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ ಕೇವಲ 2,599 ರೂ. ವಿಶೇಷವಾಗಿ ಇದರಲ್ಲಿ ವಾಟ್ಸಪ್ ಮತ್ತು ಯೂಟ್ಯೂಬ್ ಅಪ್ಲಿಕೇಶನ್ ಲಭ್ಯವಿದೆ. ಇಂತಹ ಸೌಲಭ್ಯ ಹೊಂದಿರುವ ಭಾರತದ ಅಗ್ಗದ ಫೋನ್‌ಗಳಲ್ಲಿ ಜಿಯೋ ಫೋನ್ ಪ್ರೈಮ 4G ಒಂದಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಮುಖೇಶ್ ಅಂಬಾನಿ ಬಿಡುಗಡೆ ಮಾಡಿದ ಎರಡನೇ 4G ಫೋನ್ ಇದಾಗಿದೆ. ಮುಕೇಶ್ ಅಂಬಾನಿ ಮತ್ತು ಅವರ ಮಗ ಆಕಾಶ್ ಅಂಬಾನಿ 2G ಯುಗದಲ್ಲೇ ಇರುವ 25 ಕೋಟಿ ಬಳಕೆದಾರರನ್ನು 4ಜಿಗೆ ಕರೆತರಲು ಹಲವು ಆಫರ್ ನೀಡ್ತಿದ್ದಾರೆ. ಇದಕ್ಕಾಗಿ ಕಂಪನಿಯು ಭಾರತದಲ್ಲಿ 999 ರೂ. ಬೆಲೆಯ ಜಿಯೋ ಭಾರತ್ V2 ಫೋನ್ ಅನ್ನು ಬಿಡುಗಡೆ ಮಾಡಿ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡಿತ್ತು. ಇದೀಗ ದೀಪಾವಳಿ ಹಬ್ಬಕ್ಕೂ ಮುನ್ನ ರಿಲಯನ್ಸ್ ಜಿಯೋ ಭಾರತದಲ್ಲಿ ಜಿಯೋ ಫೋನ್ ಪ್ರೈಮ 4G ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಾಟ್ಸಪ್, ಯೂಟ್ಯೂಬ್ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್ ಸಹ ಲಭ್ಯವಿದೆ.

ಹೊಸ ಜಿಯೋ ಫೋನ್ ಪ್ರೈಮ 4G ಜಿಯೋ ಮಾರ್ಟ್ ನಲ್ಲಿ ನೀಲಿ ಮತ್ತು ಹಳದಿ ಬಣ್ಣದಲ್ಲಿ ಸಿಗಲಿದೆ. ಫೋನ್ ಕ್ಯಾಶ್‌ಬ್ಯಾಕ್ ಡೀಲ್‌ಗಳು, ಬ್ಯಾಂಕ್ ಆಫರ್‌ ಮತ್ತು ಕೂಪನ್‌ಗಳನ್ನು ಒಳಗೊಂಡಿರುವ ಹಲವಾರು ಆರಂಭಿಕ ಕೊಡುಗೆಗಳನ್ನು ಸಹ ಹೊಂದಿದೆ.

ಹೆಸರೇ ಸೂಚಿಸುವಂತೆ ಈ ಹೊಸ ಫೋನ್ 4G ಸಂಪರ್ಕ ಮತ್ತು 23 ಭಾಷೆಗಳ ಆಯ್ಕೆಯನ್ನು ಹೊಂದಿದೆ. 128 ಜಿಬಿ ವಿಸ್ತರಿಸಬಹುದಾದ ಸಂಗ್ರಹಣೆಯೊಂದಿಗೆ ARM ಕಾರ್ಟೆಕ್ಸ್ A53 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು 1200 ಅಪ್ಲಿಕೇಶನ್‌ಗಳನ್ನು ಬೆಂಬಲಿಸುವ Firefox OS ಅನ್ನು ಆಧರಿಸಿದ ಆಪರೇಟಿಂಗ್ ಸಿಸ್ಟಮ್ ಆಗಿದೆ. ಫೋನ್ ಸಿಂಗಲ್ ಸಿಮ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್‌ನೊಂದಿಗೆ ಬರುತ್ತದೆ. ಈ ಎಲ್ಲಾ ವೈಶಿಷ್ಟ್ಯಗಳು 1800mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read