ಮುಕೇಶ್​ ಅಂಬಾನಿ ಕಾರು ಚಾಲಕನ ವೇತನ ಕೇಳಿದ್ರೆ ತಿರುಗುತ್ತೆ ತಲೆ…..!

ಏಷ್ಯಾದಲ್ಲೇ ಅತಿ ಶ್ರೀಮಂತ ಎನಿಸಿಕೊಂಡಿರುವ ಮುಕೇಶ್‌ ಅಂಬಾನಿ ಆಸ್ತಿ ಬಗ್ಗೆ ಇದಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಆದರೆ ಇದೀಗ ಅವರ ಕಾರಿನ ಚಾಲಕನ ವೇತನ ಎಷ್ಟು ಎಂಬ ಮಾಹಿತಿ ಹೊರಬಿದ್ದಿದ್ದು, ಎಲ್ಲರೂ ಹುಬ್ಬೇರಿಸಿದ್ದಾರೆ.

2017ರಲ್ಲಿ ಮುಕೇಶ್ ಅಂಬಾನಿ ಅವರ ವೈಯಕ್ತಿಕ ಚಾಲಕನ ವೇತನವು ತಿಂಗಳಿಗೆ ಸುಮಾರು 2 ಲಕ್ಷ ರೂ. ಇತ್ತು ಅದರರ್ಥ ವರ್ಷಕ್ಕೆ 24 ಲಕ್ಷ ರೂ. ವೇತನದ ಪ್ಯಾಕೇಜ್‌ನ್ನು ಅವರ ಕಾರು ಚಾಲಕ ಪಡೆಯುತ್ತಿದ್ದರು. ಈ ವರ್ಷ ಎಂದರೆ 2023ರಲ್ಲಿ ಅವರ ಚಾಲಕ ಎಷ್ಟು ಸಂಪಾದಿಸುತ್ತಾನೆ ಎಂಬುದು ಮಾತ್ರ ಸ್ಪಷ್ಟವಿಲ್ಲ. ಮತ್ತೊಂದು ವಿಶೇಷ ಎಂದರೆ ಈ ಚಾಲಕರಿಗೆ ಪ್ರತಿನಿತ್ಯವೂ ಕೆಲಸವಿರುವುದಿಲ್ಲ. ಆದರೆ ಸರಿಯಾದ ಸಮಯಕ್ಕೆ ಪ್ರತಿನಿತ್ಯ ಕರ್ತವ್ಯಕ್ಕೆ  ಹಾಜರಾಗಬೇಕಾಗುತ್ತದೆ.

ವರದಿಯ ಪ್ರಕಾರ ಅಂಬಾನಿ ಮನೆಯ ಚಾಲಕರನ್ನು ಖಾಸಗಿ ಗುತ್ತಿಗೆ ಸಂಸ್ಥೆಯ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಡ್ರೈವಿಂಗ್ ಸಿಬ್ಬಂದಿಗೆ ಕಠಿಣ ತರಬೇತಿ ನೀಡಲಾಗುತ್ತದೆ. ಅಂಬಾನಿಯವರ ಬುಲೆಟ್ ಪ್ರೂಫ್ ವಾಹನವನ್ನು ನಿರ್ವಹಿಸುವ ಕಾರ್ಯವನ್ನು ಹೇಳಿಕೊಡಲಾಗುತ್ತದೆ. ಅಂಬಾನಿ ಹಿಂದಿನ 11 ವರ್ಷಗಳಲ್ಲಿ ತಮ್ಮ ವೇತನವನ್ನು 15 ಕೋಟಿಗೆ ಸೀಮಿತಗೊಳಿಸಿದ್ದರು. ಆದರೆ ಕಾರಿನ ಚಾಲಕನಿಗೆ ಮಾತ್ರ ಕೈತುಂಬಾ ಸಂಬಳ ನೀಡುತ್ತಾ ಬಂದಿದ್ದಾರೆ ಎನ್ನಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read