P‌HOTO| ಮುಖೇಶ್ ಅಂಬಾನಿ ಜೊತೆ ಪಾಕ್ ರಾಜಕಾರಣಿ ಶರ್ಮಿಳಾ ಫರುಕಿ ಫೋಸ್

ಡಿಸ್ನಿಲ್ಯಾಂಡ್ ಪ್ಯಾರಿಸ್‌ನಲ್ಲಿ ಪಾಕಿಸ್ತಾನದ ರಾಜಕಾರಣಿ ಶರ್ಮಿಳಾ ಫರುಕಿ ಜೊತೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ  ಮುಖೇಶ್ ಅಂಬಾನಿ ಕಾಣಿಸಿಕೊಂಡಿದ್ದಾರೆ.  ಫರುಕಿ ಮತ್ತು ಅವರ ಕುಟುಂಬದ ಜೊತೆ ನಿಂತಿರುವ ಮುಖೇಶ್‌ ಅಂಬಾನಿ ಫೋಟೋಕ್ಕೆ ಫೋಸ್‌ ನೀಡಿದ್ದಾರೆ. ಅವರು ಮೊಮ್ಮಗಳನ್ನು ಎತ್ತಿಕೊಂಡಿದ್ದು, ಇಶಾ ಅಂಬಾನಿ ಕೂಡ, ಮುಖೇಶ್‌ ಅಂಬಾನಿ ಜೊತೆ ಪ್ಯಾರಿಸ್‌ ನಲ್ಲಿರುವುದು ದೃಢಪಟ್ಟಿದೆ.

ಶರ್ಮಿಳಾ ಫರುಕಿ ಪಾಕಿಸ್ತಾನಿ ರಾಜಕಾರಣಿಯಾಗಿದ್ದು, ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಮಾಜಿ ವಾಲ್ ಸ್ಟ್ರೀಟ್ ಬ್ಯಾಂಕರ್,  ಹಶಮ್ ರಿಯಾಜ್ ಶೇಖ್ ಅವರೊಂದಿಗೆ ಮದುವೆಯಾಗಿದ್ದಾರೆ. ಅವರಿಗೆ ಮುದ್ದಾದ ಒಂದು ಮಗನಿದ್ದಾನೆ. ಶರ್ಮಿಳಾ ಫರುಕಿ, ಪತಿ, ಮಗ ಮತ್ತು ಮುಖೇಶ್‌ ಅಂಬಾನಿ ಹಾಗೂ ಮೊಮ್ಮಗಳು ಜೊತೆಗಿರುವ ಫೋಟೋ ವೈರಲ್‌ ಆಗಿದೆ. ಶರ್ಮಿಳಾ ಹಾಗೂ ಅವರ ಪತಿ ಇಬ್ಬರೂ ಇನ್ಸ್ಟಾಗ್ರಾಮ್‌ ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ  ನಂತ್ರ  ಅಂಬಾನಿ ಕುಟುಂಬದ ಇತರ ಸದಸ್ಯರು ಪ್ಯಾರಿಸ್‌ನಲ್ಲಿದ್ದಾರೆ. ಮುಕೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ. ನೀತಾ ಅಂಬಾನಿ,  ಭಾರತದಿಂದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದು, ನೀತಾ, ಮುಖೇಶ್‌ ಜೊತೆ ಇಶಾ ಕೂಡ ಪ್ಯಾರಿಸ್‌ ನಲ್ಲಿದ್ದಾರೆ. ಇಶಾ ಅಂಬಾನಿಯ ಕೆಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read