ರಾಮ್ ಚರಣ್ ದಂಪತಿ ಪುತ್ರಿ ನಾಮಕರಣ ಸಮಾರಂಭಕ್ಕೆ ಅದ್ದೂರಿ ಸಿದ್ದತೆ; ಮುಖೇಶ್ ಅಂಬಾನಿಯಿಂದ ಕೋಟಿ ರೂ. ಮೌಲ್ಯದ ‘ಚಿನ್ನದ ತೊಟ್ಟಿಲು’ ಉಡುಗೊರೆ

ತೆಲುಗು ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಈಗ ತಾತ ಆಗಿದ್ದಾರೆ. ಚಿರಂಜೀವಿಯವರ ಪುತ್ರ ರಾಮಚರಣ್ ಹಾಗೂ ಸೊಸೆ ಉಪಾಸನಾ ಕಾಮಿನೇನಿ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದು, ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಚಿರಂಜೀವಿ ಅವರ ಮೊಮ್ಮಗಳ ನಾಮಕರಣ ಸಮಾರಂಭಕ್ಕೆ ಅದ್ದೂರಿ ಸಿದ್ದತೆ ನಡೆದಿದ್ದು, ಉಪಾಸನಾ ಅವರ ಪೋಷಕರ ಮನೆಯಲ್ಲಿ ಈ ಸಮಾರಂಭ ನಡೆಯಲಿದೆ. ನಿವಾಸವನ್ನು ಸಾಂಪ್ರದಾಯಿಕ ರೀತಿಯಲ್ಲಿ ಅಲಂಕಾರ ಮಾಡಲಾಗಿದ್ದು, ಕೃತಕ ಮಾವಿನ ಮರವನ್ನು ಸಹ ಇರಿಸಲಾಗಿದೆ.

ಇದರ ಮಧ್ಯೆ ದೇಶದ ಅತಿ ಸಿರಿವಂತ ವ್ಯಕ್ತಿ ಹಾಗೂ ಚಿರಂಜೀವಿ ಕುಟುಂಬಕ್ಕೆ ಆಪ್ತರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತವರ ಕುಟುಂಬ ವರ್ಗ, ರಾಮಚರಣ್ ಮತ್ತು ಉಪಾಸನಾ ದಂಪತಿ ಪುತ್ರಿಗೆ ಬರೋಬ್ಬರಿ ಒಂದು ಕೋಟಿ ರೂ. ಮೌಲ್ಯದ ಚಿನ್ನದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗಿದೆ.

https://twitter.com/TweetRamCharan/status/1674609465344266240?ref_src=twsrc%5Etfw%7Ctwcamp%5Etweetembed%7Ctwterm%

https://twitter.com/alwayskumar22/status/1674425727964569603?ref_src=twsrc%5Etfw%7Ctwcamp%5Etweetembed%7Ct

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read