Viral Video | ಗುರುತು ಮರೆಮಾಚಿ ಬೈಕ್ ರೈಡ್ ಮಾಡಿದ ಎಂ.ಎಸ್. ಧೋನಿ; ಸ್ವಾತಂತ್ರ್ಯ ದಿನದ ವೈಬ್ಸ್ ಎಂದ ಫ್ಯಾನ್ಸ್

ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿಗೆ ಕ್ರಿಕೆಟ್ ಮಾತ್ರವಲ್ಲ ಕಾರು, ಬೈಕ್ ಅಂದ್ರೆ ತುಂಬಾ ಇಷ್ಟ ಎಂಬುದು ಅವರ ಅಭಿಮಾನಿಗಳಿಗೆ ಚೆನ್ನಾಗಿ ತಿಳಿದಿದೆ.

ಇತ್ತೀಚೆಗಷ್ಟೇ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಹಾಗೂ ಸುನೀಲ್ ಜೋಶಿ ರಾಂಚಿಯ ಧೋನಿ ನಿವಾಸದಲ್ಲಿ ಭೇಟಿಯಾಗಿದ್ದರು.

ಈ ವೇಳೆ ಧೋನಿಯಲ್ಲಿರುವ ಬೈಕ್ ಹಾಗೂ ಕಾರುಗಳ ಕಲೆಕ್ಷನ್ ಕಂಡು ಮಾಜಿ ಕ್ರಿಕೆಟಿಗರು ಅಚ್ಚರಿಗೊಂಡಿದ್ದರು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅವರು ಗ್ಯಾರೇಜ್ ಶೋರೂಮ್ ರೀತಿ ಎಂದು ಹೇಳಿದ್ದರು.

ಇದೀಗ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ, ಸ್ವಾತಂತ್ರ್ಯ ದಿನದಂದು ಬೈಕ್ ಓಡಿಸುತ್ತಿರುವುದರ ವಿಡಿಯೋ ವೈರಲ್ ಆಗಿದೆ.

ತನ್ನ ಹೋಂಡಾ ರೆಪ್ಸೋಲ್-150 ಅನ್ನು ರೈಡ್ ಮಾಡುತ್ತಾ ತೋಟದ ಮನೆಯ ಗೇಟ್ ಒಳಗೆ ಪ್ರವೇಶಿದ್ದಾರೆ. ಈ ವೇಳೆ ಅವರು ತಮ್ಮ ಗುರುತನ್ನು ಮರೆಮಾಜಿ ಬೈಕ್ ಸವಾರಿ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read