ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ T20 ಪಂದ್ಯ ರಾಂಚಿಯ JSCA ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದೆ.
ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಪತ್ನಿ ಸಾಕ್ಷಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಸ್ಟೇಡಿಯಂನಲ್ಲಿ ಪತ್ನಿಯೊಂದಿಗಿದ್ದ ಧೋನಿ ಕ್ಯಾಮೆರಾ ಕಡೆಗೆ ಕೈ ಬೀಸುತ್ತಿರುವ ಫೋಟೋ ವೈರಲ್ ಆಗಿದೆ.
ಇದಕ್ಕೂ ಮೊದಲು ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಗೆ ಮುಂಚಿತವಾಗಿ ಧೋನಿ ತಂಡವನ್ನು ಭೇಟಿ ಮಾಡಿದ್ದರು ಎಂಬುದನ್ನು ಬಹಿರಂಗಪಡಿಸಿದರು.
ರಾಂಚಿ ಧೋನಿ ಹುಟ್ಟಿ ಬೆಳೆದ ಊರು. ಮಹಿ ಭಾಯಿ ಇಲ್ಲಿದ್ದಾರೆ, ನಾವು ಅವರನ್ನು ಭೇಟಿಯಾಗಿದ್ದೇವೆ. ಭೇಟಿಯಾದಾಗ ನಾವು ಆಟದ ಬದಲಿಗೆ ಜೀವನದ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತೇವೆ. ನಾವು ಒಟ್ಟಿಗೆ ಆಡಿದಾಗ ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ ಎಂದು ಪಾಂಡ್ಯ ರಾಂಚಿಯಲ್ಲಿ ನಡೆದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
GOAT Dhoni is here in Ranchi. pic.twitter.com/XnaRVBGbWH
— Johns. (@CricCrazyJohns) January 27, 2023