ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಯಲ್ಲಿ ಗಾಲ್ಫ್ ಆಟವನ್ನಾಡಿದ್ದು ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಇಬ್ಬರೂ ಗಾಲ್ಫ್ಮೈದಾನದಲ್ಲಿ ಫೋಟೋಗೆ ಪೋಸ್ ನೀಡಿದ್ದು ಈ ಫೋಟೋ ಸಹ ವೈರಲ್ ಆಗಿದೆ. ಫೋಟೋದಲ್ಲಿ ಟ್ರಂಪ್ ಕೆಂಪು ಬಣ್ಣದ MAGA (ಮೇಕ್ ಅಮೆರಿಕ ಗ್ರೇಟ್ ಅಗೇನ್) ಕ್ಯಾಪ್ ಧರಿಸಿರೋದನ್ನ ನೀವು ಕಾಣಬಹುದಾಗಿದೆ.
ದುಬೈ ಮೂಲದ ಉದ್ಯಮಿ ಹಿತೇಶ್ ಸಾಂಘ್ವಿ, ಧೋನಿ ಹಾಗೂ ಡೊನಾಲ್ಡ್ ಟ್ರಂಪ್ ಗಾಲ್ಫ್ ಆಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾರ್ಲೋಸ್ ಅಲ್ಕರಾಜ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ನಡುವಿನ ಯುಎಸ್ ಓಪನ್ 2023 ಕ್ವಾರ್ಟರ್‌ಫೈನಲ್ ಪಂದ್ಯದಲ್ಲೂ MS ಧೋನಿ ಕಾಣಿಸಿಕೊಂಡಿದ್ದರು.
ಇನ್ನು ಈ ಫೋಟೋ ಹಾಗೂ ವಿಡಿಯೋಗಳನ್ನ ಕಣ್ತುಂಬಿಕೊಂಡ ಧೋನಿ ಅಭಿಮಾನಿಗಳು ಥಾಲಾ (ತಮಿಳು ಅರ್ಥ ದೇವರು) ಎಂದು ಕ್ಯಾಪ್ಟನ್ ಕೂಲ್ರನ್ನ ಕೊಂಡಾಡಿದ್ದಾರೆ.
Former US president Trump playing golf with Dhoni.
Thala fever in USA.#dhoni #thala pic.twitter.com/RdUNORQUdW— Venus 💫 (@invincible39) September 8, 2023