Viral Video | ಯುವ ಕ್ರಿಕೆಟಿಗನಿಗೆ ಬೈಕ್‌ನಲ್ಲಿ ಲಿಫ್ಟ್ ನೀಡಿದ ಎಂ.ಎಸ್. ಧೋನಿ

ಕ್ರಿಕೆಟ್ ಇತಿಹಾಸದಲ್ಲಿ ಎಂಎಸ್ ಧೋನಿ ಪ್ರಸಿದ್ದ ಮ್ಯಾಚ್ ಫಿನಿಶರ್ ಎಂಬುದು ಎಲ್ಲರಿಗೂ ಗೊತ್ತಿದೆ. ಎಂತಹದೆ ಪರಿಸ್ಥಿತಿಯಲ್ಲೂ ಕೂಲ್ ಆಗಿರುವ ಅವರ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಅವರಿಗೆ ‘ಕ್ಯಾಪ್ಟನ್ ಕೂಲ್’ ಎಂಬ ಹೆಸರನ್ನು ತಂದುಕೊಟ್ಟಿದೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಕ್ರಿಕೆಟ್ ಮೇಲಿನ ಆಸಕ್ತಿಯ ಹೊರತಾಗಿಯೂ, ಕಾರು ಮತ್ತು ಬೈಕ್‌ಗಳ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಎಂ.ಎಸ್ ಧೋನಿ ಅವರಲ್ಲಿ ಸ್ವದೇಶಿ ನಿರ್ಮಿತ ಕಾರು ಮತ್ತು ಬೈಕ್‌ಗಳ ಅತೀ ಹೆಚ್ಚಿನ ಕಲೆಕ್ಷನ್ಸ್ ಇದೆ.

ಎಂ.ಎಸ್ ಧೋನಿ ಹೆಚ್ಚಾಗಿ ತಮ್ಮ ಯಮಹಾ ಆರ್.ಡಿ. 350 ಬೈಕ್‌ನ್ನು ಹೆಚ್ಚು ಯೂಸ್ ಮಾಡ್ತಾರೆ. ಅಭಿಮಾನಿಯೊಬ್ಬರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಎಂಎಸ್ ಧೋನಿ ತಮ್ಮ ಯಮಹಾ ಆರ್‌ಡಿ 350 ಬೈಕ್‌ನಲ್ಲಿ ಯುವ ಕ್ರಿಕೆಟಿಗನಿಗೆ ಲಿಫ್ಟ್ ನೀಡುತ್ತಿರುವುದು ಕಂಡು ಬಂದಿದೆ.

ಎಂಎಸ್ ಧೋನಿ ತಮ್ಮ ಯಮಹಾ ಆರ್‌ಡಿ 350 ಬೈಕ್‌ನ್ನು ರೈಡ್ ಮಾಡ್ತಿದ್ರೆ ಯುವ ಕ್ರಿಕೆಟಿಗ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಯುವ ಕ್ರಿಕೆಟಿಗನ ಈ ವೀಡಿಯೊವನ್ನು ರೆಕಾರ್ಡ್ ಮಾಡಿದ್ದು ಕ್ರಿಕೆಟ್ ದಂತಕಥೆಯೊಂದಿಗೆ ರೈಡ್ ಮಾಡುವ ಅವಕಾಶ ಸಿಕ್ಕಿದುದರಿಂದ ಅಪಾರ ಖುಷಿ ಪಟ್ಟಿದ್ದಾರೆ.

ಎಂಎಸ್ ಧೋನಿ ಮೇಡ್ ಇನ್ ಇಂಡಿಯಾದ ತಿವ್ರಾ ಕಂಪೆನಿಯ ಹೆಲ್ಮೆಟ್ ಬಳಸುತ್ತಿರುವುದನ್ನು ವಿಡಿಯೋದಲ್ಲಿ ಕಂಡು ಬಂದಿದೆ. ಎಂಎಸ್ ಧೋನಿಯ ಯಮಹಾ ಆರ್‌ಡಿ 350 ಬೈಕ್‌ನಲ್ಲಿ ದಟ್ಟವಾದ ಹೊಗೆ ಹೋಗುತ್ತಿರುವುದನ್ನು ಬೈಕ್ ಪ್ರೇಮಿಗಳು ಗುರುತಿಸಿದ್ದಾರೆ. ಯಮಹಾ ಆರ್‌ಡಿ 350 ಬೈಕ್ ಟೂ ಸ್ಟ್ರೋಕ್ ಬೈಕ್ ಆಗಿದ್ದು ಮತ್ತು ಅಂತಹ ಬೈಕ್‌ಗಳು ಅತಿಯಾದ ಹೊಗೆಯನ್ನು ಉತ್ಪಾದಿಸುತ್ತೆ ಎಂಬುದು ಸಾಮಾನ್ಯ ಸಂಗತಿಯಾಗಿದೆ.

ಎಂ.ಎಸ್ ಧೋನಿ ಅವರ ಬಳಿ ಯಮಹಾ RD350 ‌ಬೈಕ್‌ನ ಜೊತೆ ಸುಜುಕಿ ಶೋಗನ್, ಸುಜುಕಿ ಶಾವೊಲಿನ್, ಯಮಹಾ RX100, ಯಮಹಾ RX135, ಜಾವಾ, ಯೆಜ್ಡಿ ರೋಡ್ಕಿಂಗ್ ಮತ್ತು ಇನ್ನೂ ಅನೇಕ ಫೇಮಸ್ ಟೂ ಸ್ಟ್ರೋಕ್ ಬೈಕ್‌ಗಳು ಇದೆ. ಇತ್ತೀಚೆಗೆ, ಎಂಎಸ್ ಧೋನಿ ಅವರ ಸಂಗ್ರಹದಲ್ಲಿರುವ ಬೈಕ್ ಹಾಗೂ ಕಾರುಗಳ 109 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಎಂಎಸ್ ಧೋನಿಯ ಖಾಸಗಿ ಗ್ಯಾರೇಜ್ ಬಹುತೇಕ ಭರ್ತಿಯಾಗಿದೆ ಮತ್ತು ಹೆಚ್ಚಿನ ಬೈಕ್‌ಗಳಿಗೆ ಇನ್ನು ಜಾಗವಿಲ್ಲ ಎಂದು ಕಂಡು ಬಂದಿದೆ. ಗುರುತಿಸಬಹುದಾದ ಕೆಲವು ಮಾಡೆಲ್‌ಗಳಲ್ಲಿ ಹಾರ್ಲೆ-ಡೇವಿಡ್ಸನ್ ಫ್ಯಾಟ್ ಬಾಯ್, ಕವಾಸಕಿ ನಿಂಜಾ H2, ಯಮಹಾ ಆರ್.ಡಿ 350, ನಿಸ್ಸಾನ್ ಜೊಂಗಾ, ಲ್ಯಾಂಡ್ ರೋವರ್ ಡಿಫೆಂಡರ್ ಮತ್ತು ಇನ್ನೂ ಹೆಚ್ಚಿನವು ಇದೆ.

https://twitter.com/i/status/1702551159389774300

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read